ಸೆಟ್ಟಿಂಗ್‌ಗಳು

ಸಾಮಾನ್ಯ ಸ್ಟೀರಿಂಗ್ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಲಾಗುತ್ತಿದೆ


ಸಮಯ ಮತ್ತು ದಿನಾಂಕ, ಸಿಸ್ಟಮ್‌ ಭಾಷೆ ಮತ್ತು ಹೆಚ್ಚಿನವುಗಳಂತಹ ನಿಮ್ಮ ಸಿಸ್ಟಮ್‌ ಪರಿಸರ ಸೆಟ್ಟಿಂಗ್‌ಗಳನ್ನು ನೀವು ಗ್ರಾಹಕೀಯಗೊಳಿಸಬಹುದು.
ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಪ್ರದರ್ಶಿಸಲಾದ ಸ್ಕ್ರೀನ್‌ಗಳು ಮತ್ತು ಲಭ್ಯವಿರುವ ಆಯ್ಕೆಗಳು ಬದಲಾಗಬಹುದು.
ಹೋಮ್ ಸ್ಕ್ರೀನ್‌ನಲ್ಲಿ, ಎಲ್ಲ ಮೆನುಗಳು > ಸೆಟ್ಟಿಂಗ್‌ಗಳು > ಸಾಮಾನ್ಯ ವನ್ನು ಒತ್ತಿರಿ ಮತ್ತು ಬದಲಾಯಿಸಲು ಆಯ್ಕೆಯನ್ನು ಒತ್ತಿರಿ.

ಆವೃತ್ತಿ ಮಾಹಿತಿ/ಅಪ್‌ಡೇಟ್‌ (ಅರ್ಹವಾಗಿದ್ದರೆ)

ನಿಮ್ಮ ಸಿಸ್ಟಮ್‌ನ ಆವೃತ್ತಿಯ ಮಾಹಿತಿ ಅನ್ನು ನೀವು ವೀಕ್ಷಿಸಬಹುದು ಅಥವಾ ಅದನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬಹುದು. ನಿಮ್ಮ ಸಿಸ್ಟಮ್‌ ಅನ್ನು ನವೀಕರಿಸಲು, ನಿಮ್ಮ ಸ್ಥಳೀಯ ಡೀಲರ್ ಶಿಪ್ ಗೆ ಭೇಟಿ ನೀಡಿ.
ಎಚ್ಚರಿಕೆ
  • ಒಟ್ಟು ಡೇಟಾ ಮೊತ್ತವನ್ನು ಅವಲಂಬಿಸಿ, ನವೀಕರಣವು ಹಲವಾರು ನಿಮಿಷಗಳನ್ನು ತೆಗೆದುಕೊಳ್ಳಬಹುದು.
  • ನವೀಕರಣವು ಪ್ರಗತಿಯಲ್ಲಿರುವಾಗ ಸಿಸ್ಟಮ್‌ ಅನ್ನು ಆಫ್ ಮಾಡಬೇಡಿ ಅಥವಾ ಶೇಖರಣಾ ಸಾಧನವನ್ನು ತೆಗೆದುಹಾಕಬೇಡಿ. ವಿದ್ಯುತ್ ಸರಬರಾಜು ಕಡಿತಗೊಂಡರೆ ಅಥವಾ ಶೇಖರಣಾ ಸಾಧನವನ್ನು ಸಿಸ್ಟಮ್‌ನಿಂದ ತೆಗೆದುಹಾಕಿದರೆ, ಅದು ಡೇಟಾವನ್ನು ಹಾನಿಗೊಳಿಸಬಹುದು ಅಥವಾ ಸಿಸ್ಟಮ್ ಅಸಮರ್ಪಕ ಕಾರ್ಯವನ್ನು ಉಂಟುಮಾಡಬಹುದು.

ಸಿಸ್ಟಂ ಮಾಹಿತಿ

ನಿಮ್ಮ ಸಿಸ್ಟಮ್ ಮಾಹಿತಿಯನ್ನು ನೀವು ನೋಡಬಹುದು.

ಮೆಮೊರಿ

ನಿಮ್ಮ ಸಿಸ್ಟಮ್‌ನ ಮೆಮೊರಿಯ ಶೇಖರಣಾ ಮಾಹಿತಿಯನ್ನು ನೀವು ವೀಕ್ಷಿಸಬಹುದು.

ಮ್ಯಾನ್ಯುಯಲ್

ನಿಮ್ಮ ಸ್ಮಾರ್ಟ್‌ಫೋನ್‌‌ನೊಂದಿಗೆ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನೀವು ಸಿಸ್ಟಮ್‌ನ ವೆಬ್ ಕೈಪಿಡಿಯನ್ನು ಪ್ರವೇಶಿಸಬಹುದು.
ಎಚ್ಚರಿಕೆ
QR ಕೋಡ್ ಸ್ಕ್ಯಾನ್ ಮಾಡುವ ಮೊದಲು ನಿಮ್ಮ ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ಪಾರ್ಕ್ ಮಾಡಿ. ಸುರಕ್ಷತೆಯ ಕಾರಣಗಳಿಗಾಗಿ, ವಾಹನವು ಚಲಿಸುತ್ತಿರುವ ಸಿಸ್ಟಮ್ ನ ಪರದೆಯಿಂದ QR ಕೋಡ್‌ಗಳನ್ನು ಪ್ರವೇಶಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಡೀಫಾಲ್ಟ್ (ಅರ್ಹವಾಗಿದ್ದರೆ)

ನಿಮ್ಮ ಸಿಸ್ಟಮ್ ಸೆಟ್ಟಿಂಗ್‌ಗಳನ್ನು ಡೀಫಾಲ್ಟ್ ಮೌಲ್ಯಗಳಿಗೆ ಮರುಹೊಂದಿಸಬಹುದು. ಸಿಸ್ಟಮ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಬಳಕೆದಾರರ ಡೇಟಾವನ್ನು ಸಹ ಅಳಿಸಲಾಗುತ್ತದೆ.

ಬ್ಲೂಟೂತ್‌ ರಿಮೋಟ್‌ ಲಾಕ್

ರಿಮೋಟ್ ಆಪ್ ಗಳ ಮೂಲಕ ಸಿಸ್ಟಮ್ ಅನ್ನು ಆಪರೇಟಿಂಗ್ ಮಾಡುವುದರಿಂದ ನೀವು Bluetooth ಸಾಧನಗಳನ್ನು ಲಾಕ್ ಮಾಡಬಹುದು.

ದಿನಾಂಕ/ಸಮಯ

ನೀವು ಪ್ರಸ್ತುತ ಸಮಯ ಮತ್ತು ದಿನಾಂಕವನ್ನು ಹೊಂದಿಸಬಹುದು ಅಥವಾ ಸಮಯ ಪ್ರದರ್ಶನ ಸ್ವರೂಪದಲ್ಲಿ ಬದಲಾಯಿಸಬಹುದು.

ಸ್ವಯಂ ಸಮಯ ಸೆಟ್ಟಿಂಗ್‌

GPS ನಿಂದ ಸಮಯದ ಮಾಹಿತಿ ಅನ್ನು ಸ್ವೀಕರಿಸಲು ನೀವು ಸಿಸ್ಟಮ್ ಅನ್ನು ಹೊಂದಿಸಬಹುದು. ನೀವು ಈ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದಾಗ, ನೀವು ಸಮಯ ಮತ್ತು ದಿನಾಂಕವನ್ನು ಹಸ್ತಚಾಲಿತವಾಗಿ ಹೊಂದಿಸಬಹುದು.

24-ಗಂಟೆ ಫಾರ್ಮ್ಯಾಟ್

ನೀವು 24 ಗಂಟೆಗಳ ಸ್ವರೂಪದಲ್ಲಿ ಸಮಯವನ್ನು ಹೊಂದಿಸಬಹುದು.

ಭಾಷೆ/Language

ನೀವು ಸಿಸ್ಟಮ್‌ ಭಾಷೆಯನ್ನು ಬದಲಾಯಿಸಬಹುದು.
ಸೂಚನೆ
  • ಆಯ್ಕೆ ಮಾಡಿದ ಭಾಷೆಯನ್ನು ಅನ್ವಯಿಸಲು ಸಿಸ್ಟಮ್‌ಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಬದಲಾವಣೆ ಪೂರ್ಣಗೊಂಡಾಗ, ಸಿಸ್ಟಮ್‌ ಭಾಷೆ ಬದಲಾಗಿದೆ ಎಂದು ಹೇಳುವ ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ವಿಂಡೋವನ್ನು ಮುಚ್ಚಲು ಸ್ಕ್ರೀನ್ ಮೇಲೆ ಪಾಪ್-ಅಪ್ ವಿಂಡೋ ಪ್ರದೇಶದ ಹೊರೆಗೆ ಒತ್ತಿರಿ ಅಥವಾ ಕೆಲವು ಸೆಕೆಂಡುಗಳ ಕಾಲ ನಿರೀಕ್ಷಿಸಿ.
  • ಈ ಸೆಟ್ಟಿಂಗ್ MP3 ಫೈಲ್ ಹೆಸರುಗಳಂತಹ ಬಳಕೆದಾರರ ಡೇಟಾದ ಮೇಲೆ ಪರಿಣಾಮ ಬೀರುವುದಿಲ್ಲ.

ಕೀಬೋರ್ಡ್

ನೀವು ಪ್ರತಿ ಭಾಷೆಗೆ ಕೀಬೋರ್ಡ್ ಪ್ರಕಾರವನ್ನು ಆಯ್ಕೆ ಮಾಡಬಹುದು.
ಸೂಚನೆ
ಈ ಸೆಟ್ಟಿಂಗ್ ಅನ್ನು ನಿಮ್ಮ ಸಿಸ್ಟಮ್‌ನಲ್ಲಿರುವ ಎಲ್ಲಾ ಪಠ್ಯ ಇನ್ ಪುಟ್ ಗೆ ಅನ್ವಯಿಸಲಾಗುತ್ತದೆ.

ಇಂಗ್ಲಿಷ್‌ ಕೀಬೋರ್ಡ್‌ ವಿಧ

ನೀವು ಇಂಗ್ಲಿಷ್ ಕೀಬೋರ್ಡ್ ಅನ್ನು ಆಯ್ಕೆಮಾಡಬಹುದು.

ಕೊರಿಯನ್‌ ಕೀಬೋರ್ಡ್ ವಿಧ

ನೀವು ಕೊರಿಯನ್ ಕೀಬೋರ್ಡ್ ಅನ್ನು ಆಯ್ಕೆ ಮಾಡಬಹುದು.

ಮೀಡಿಯಾ ಸೆಟ್ಟಿಂಗ್‌ಗಳು (ಅರ್ಹವಾಗಿದ್ದರೆ)

ನೀವು ರೇಡಿಯೋ ಅಥವಾ ಮೀಡಿಯಾ ಪ್ಲೇಯರ್ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು.

ವಾಹನ ಪ್ರಾರಂಭದಲ್ಲಿ ರೇಡಿಯೋ/ಮೀಡಿಯಾ ಆಫ್ ಆಗಿದೆ

ಎಂಜಿನ್ ಆಫ್ ಮಾಡಿದಾಗ ರೇಡಿಯೋ ಅಥವಾ ಮೀಡಿಯಾ ಪ್ಲೇಯರ್ ಅನ್ನು ಆಫ್ ಮಾಡಲು ನೀವು ಈ ಆಯ್ಕೆಯನ್ನು ಸಕ್ರಿಯಗೊಳಿಸಬಹುದು.

ಎಂಜಿನ್ ಆಫ್ ಮಾಡಿದಾಗ ಇನ್ಫೋಟೈನ್ಮೆಂಟ್ ಉಳಿಯುತ್ತದೆ (ಅರ್ಹವಾಗಿದ್ದರೆ)

ವಾಹನ ಆಫ್ ಆದ ನಂತರ ನೀವು ರೇಡಿಯೋ ಅಥವಾ ಮೀಡಿಯಾ ಪ್ಲೇಯರ್ ಅನ್ನು ನಿರ್ದಿಷ್ಟ ಸಮಯದವರೆಗೆ ಆನ್ ಆಗಿರುವಂತೆ ಸೆಟ್ ಮಾಡಲು ಈ ಆಯ್ಕೆಯನ್ನು ನೀವು ಸಕ್ರಿಯಗೊಳಿಸಬಹುದು.

ಮೀಡಿಯಾ ಬದಲಾವಣೆ ಸೂಚನೆಗಳನ್ನು ಪ್ರದರ್ಶಿಸಿ (ಅರ್ಹವಾಗಿದ್ದರೆ)

ಮುಖ್ಯ ಮೀಡಿಯಾ ಸ್ಕ್ರೀನ್‌ನಲ್ಲಿ ಇಲ್ಲದಿರುವಾಗ ಸ್ಕ್ರೀನ್ ಮೇಲ್ಭಾಗದಲ್ಲಿ ಮೀಡಿಯಾ ಮಾಹಿತಿ ಅನ್ನು ಸಂಕ್ಷಿಪ್ತವಾಗಿ ಪ್ರದರ್ಶಿಸಲು ನೀವು ಹೊಂದಿಸಬಹುದು. ಕಂಟ್ರೋಲ್ ಪ್ಯಾನಲ್ ಅಥವಾ ಸ್ಟೀರಿಂಗ್ ವೀಲ್‌ನಲ್ಲಿ ಯಾವುದೇ ಕಂಟ್ರೋಲ್‌ಗಳನ್ನು ಬಳಸಿಕೊಂಡು ನೀವು ಮೀಡಿಯಾ ಐಟಂ ಅನ್ನು ಬದಲಾಯಿಸಿದರೆ, ಈ ಸೆಟ್ಟಿಂಗ್ಅನ್ನು ಲೆಕ್ಕಿಸದೇ ಮೀಡಿಯಾ ಮಾಹಿತಿಯು ಗೋಚರಿಸುತ್ತದೆ.

ಡೀಫಾಲ್ಟ್ (ಅರ್ಹವಾಗಿದ್ದರೆ)

ನಿಮ್ಮ ಸಿಸ್ಟಮ್ ಸೆಟ್ಟಿಂಗ್‌ಗಳನ್ನು ಡೀಫಾಲ್ಟ್ ಮೌಲ್ಯಗಳಿಗೆ ಮರುಹೊಂದಿಸಬಹುದು. ಸಿಸ್ಟಮ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಬಳಕೆದಾರರ ಡೇಟಾವನ್ನು ಸಹ ಅಳಿಸಲಾಗುತ್ತದೆ.

Screensaver (ಅರ್ಹವಾಗಿದ್ದರೆ)

ಕಂಟ್ರೋಲ್ ಪ್ಯಾನಲ್‌ನಲ್ಲಿ ಪವರ್ ಬಟನ್ ಅನ್ನು ಒತ್ತುವ ಮೂಲಕ ಮತ್ತು ಹಿಡಿದಿಟ್ಟುಕೊ್ಳುವ ಮೂಲಕ ನೀವು ಸ್ಕ್ರೀನ್ ಅನ್ನು ಆಫ್ ಮಾಡಿದಾಗ ಪ್ರದರ್ಶಿಸಲು ಸ್ಕ್ರೀನ್ ಸೇವರ್ ಆಯ್ಕೆಯನ್ನು ನೀವು ಆಯ್ಕೆಮಾಡಬಹುದು.
  • Digital clock: ಡಿಜಿಟಲ್ ಗಡಿಯಾರವನ್ನು ಪ್ರದರ್ಶಿಸಲಾಗುತ್ತಿದೆ.
  • Analogue clock: ಅನ್‌ಲಾಗ್ ಗಡಿಯಾರವನ್ನು ಪ್ರದರ್ಶಿಸಲಾಗುತ್ತದೆ.
  • None: ಯಾವುದೇ ಸ್ಕ್ರೀನ್ ಸೇವರ್ ಅನ್ನು ಪ್ರದರ್ಶಿಸಲಾಗಿಲ್ಲ.