ಸಿಸ್ಟಮ್ ಅವಲೋಕನ

ಘಟಕಗಳ ಹೆಸರುಗಳು ಮತ್ತು ಕಾರ್ಯಗಳು


ಕೆಳಗಿನವುಗಳು ನಿಮ್ಮ ಸಿಸ್ಟಮ್‌ನ ಕಂಟ್ರೋಲ್ ಪ್ಯಾನಲ್ ಮತ್ತು ಸ್ಟೀರಿಂಗ್ ವೀಲ್ ರಿಮೋಟ್ ಕಂಟ್ರೋಲ್‌ನಲ್ಲಿರುವ ಘಟಕಗಳ ಹೆಸರುಗಳು ಮತ್ತು ಕಾರ್ಯಗಳನ್ನು ವಿವರಿಸುತ್ತದೆ.

ಕಂಟ್ರೋಲ್ ಪ್ಯಾನಲ್

ಸೂಚನೆ
  • ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಸಿಸ್ಟಮ್ ಘಟಕಗಳ ನೋಟ ಮತ್ತು ವಿನ್ಯಾಸವು ನಿಜವಾದ ಉತ್ಪನ್ನಕ್ಕಿಂತ ಭಿನ್ನವಾಗಿರಬಹುದು. ತ್ವರಿತ ರೆಫರೆನ್ಸ್ ಮಾರ್ಗದರ್ಶಿ ಅನ್ನು ನೋಡಿ.
  • ಮಾಹಿತಿ ಮನರಂಜನೆ/ಹವಾಮಾನ ಬದಲಾವಣೆ ನಿಯಂತ್ರಕದ ಬಗ್ಗೆ ಮಾಹಿತಿಗಾಗಿ, ಮಾಹಿತಿ ಮನರಂಜನೆ/ಹವಾಮಾನ ಬದಲಿಸುವ ನಿಯಂತ್ರಕ ಕೈಪಿಡಿಯನ್ನು ನೋಡಿ (http://webmanual.kia.com/SwitchableController/index.html) (ಅರ್ಹವಾಗಿದ್ದರೆ).

ರೇಡಿಯೋ ಬಟನ್
  • ರೇಡಿಯೋ ಆನ್ ಮಾಡಿ. ರೇಡಿಯೋ ಕೇಳುತ್ತಿರುವಾಗ, ರೇಡಿಯೋ ಮೋಡ್ ಅನ್ನು ಬದಲಾಯಿಸಲು ಮತ್ತೆ ಒತ್ತಿ.
  • ರೇಡಿಯೋ/ಮೀಡಿಯಾ ಆಯ್ಕೆ ವಿಂಡೋವನ್ನು ಪ್ರದರ್ಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
ಮೀಡಿಯಾ ಬಟನ್
  • ಮಾಧ್ಯಮ ಸಂಗ್ರಹಣೆ ಡಿವೈಸ್‌ನಿಂದ ಕಂಟೆಂಟ್ ಅನ್ನು ಪ್ಲೇ ಮಾಡಿ.
  • ಮಾಧ್ಯಮ ಆಯ್ಕೆ ವಿಂಡೋವನ್ನು ಪ್ರದರ್ಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
ಕಸ್ಟಮ್ ಬಟನ್ ()
  • ಕಸ್ಟಮ್ ಕಾರ್ಯವನ್ನು ಬಳಸಿ.
  • ಕಾರ್ಯ ಸೆಟ್ಟಿಂಗ್ ಸ್ಕ್ರಿನ್ ಪ್ರವೇಶ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
ಪವರ್ ಬಟನ್ (POWER)/ವಾಲ್ಯೂಮ್ ನಾಬ್ (VOL)
  • ರೇಡಿಯೊ/ಮಾಧ್ಯಮ ಕಾರ್ಯವನ್ನು ಆನ್ ಅಥವಾ ಆಫ್ ಮಾಡಲು ಒತ್ತಿ.
  • ಸ್ಕ್ರಿನ್ ಮತ್ತು ಸೌಂಡ್ ಆಫ್ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
  • ಸಿಸ್ಟಮ್ ಸೌಂಡ್ ವಾಲ್ಯೂಮ್ ಅನ್ನು ಸರಿಹೊಂದಿಸಲು ನಾಬ್ ಅನ್ನು ಎಡಕ್ಕೆ ಅಥವಾ ಬಲಕ್ಕೆ ತಿರುಗಿ.
ರಿಸೆಟ್ ಬಟನ್
  • ಸಿಸ್ಟಮ್ ಮರುಪ್ರಾರಂಭಿಸಿ.
ಶೋಧ ಹಿಂದೆ/ಮುಂದೆ ಬಟನ್ (SEEK/TRACK)
  • ರೇಡಿಯೊವನ್ನು ಕೇಳುವಾಗ, ಬ್ರಾಡ್‌ಕಾಸ್ಟಿಂಗ್ ಸ್ಟೇಷನ್ ಅನ್ನು ಬದಲಾಯಿಸಿ.
  • ಮಾಧ್ಯಮ ಪ್ಲೇ ಮಾಡುವಾಗ, ಟ್ರ್ಯಾಕ್/ಫೈಲ್ ಅನ್ನು ಬದಲಾಯಿಸಿ. ರಿವೈಂಡ್ ಮಾಡಲು ಅಥವಾ ಫಾಸ್ಟ್ ಫಾರ್ವರ್ಡ್ ಮಾಡಲು ಒತ್ತಿ ಹಿಡಿದುಕೊಳ್ಳಿ (Bluetooth ಆಡಿಯೊ ಮೋಡ್ ಹೊರತುಪಡಿಸಿ).
ಸೆಟಪ್ ಬಟನ್
  • ಸೆಟ್ಟಿಂಗ್‌ಗಳ ಸ್ಕ್ರಿನ್ ಅನ್ನು ಪ್ರವೇಶಿಸಿ.
  • ಸಾಫ್ಟ್ವೇರ್ ಆವೃತ್ತಿ ಮಾಹಿತಿ ಸ್ಕ್ರೀನ್ಪ್ರವೇಶಿಸಲು ಒತ್ತಿ ಹಿಡಿಯಿರಿ.
ಶೋಧ ನಾಬ್ (TUNE FILE)
  • ರೇಡಿಯೊ ಕೇಳುತ್ತಿರುವಾಗ, ಆವರ್ತನವನ್ನು ಸರಿಹೊಂದಿಸಿ ಅಥವಾ ಪ್ರಸಾರ ಮಾಡುವ ಸ್ಟೇಶನ್ ಅನ್ನು ಬದಲಾಯಿಸಿ.
  • ಮಾಧ್ಯಮವನ್ನು ಪ್ಲೇ ಮಾಡುವಾಗ, ಟ್ರ್ಯಾಕ್/ಫೈಲ್‌ಗಾಗಿ ಹುಡುಕಿ (Bluetooth ಆಡಿಯೊ ಮೋಡ್ ಹೊರೆತುಪಡಿಸಿ).
  • ಹುಡುಕಾಟದ ವೇಳೆ, ಪ್ರಸ್ತುತ ಟ್ರ್ಯಾಕ್/ಫೈಲ್ ಆಯ್ಕೆ ಮಾಡಲು ಒತ್ತಿರಿ.

ಸ್ಟೀರಿಂಗ್ ವೀಲ್ ರಿಮೋಟ್ ಕಂಟ್ರೋಲ್

ಸೂಚನೆ
ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಸಿಸ್ಟಮ್ ಘಟಕಗಳ ನೋಟ ಮತ್ತು ವಿನ್ಯಾಸವು ನಿಜವಾದ ಉತ್ಪನ್ನಕ್ಕಿಂತ ಭಿನ್ನವಾಗಿರಬಹುದು. ತ್ವರಿತ ರೆಫರೆನ್ಸ್ ಮಾರ್ಗದರ್ಶಿ ಅನ್ನು ನೋಡಿ.

ವಾಯ್ಸ್‌ ರೆಕಾಗ್ನಿಶನ್ ಬಟನ್ ()
  • ಫೋನ್ ಪ್ರೊಜೆಕ್ಷನ್ ಮೂಲಕ ಸಂಪರ್ಕಿತ ಸ್ಮಾರ್ಟ್‌ಫೋನ್‌ನ ವಾಯ್ಸ್‌ ರೆಕಾಗ್ನಿಶನ್ ಅನ್ನು ಆರಂಭಿಸುವುದು ಅಥವಾ ಕೊನೆಗೊಳಿಸುವುದಕ್ಕೆ ಒತ್ತಿ. (ಬಟನ್ ನ ಕಾರ್ಯಾಚರಣೆಯು ಸ್ಮಾರ್ಟ್‌ಫೋನ್ ವಿಶೇಷಣಗಳನ್ನು ಅವಲಂಬಿಸಿ ಬದಲಾಗಬಹುದು.)
MODE ಬಟನ್
  • ಸಿಸ್ಟಮ್ ಮೋಡ್ ಅನ್ನು ಬದಲಿಸಲು ಪದೇ ಪದೇ ಬಟನ್ ಅನ್ನು ಒತ್ತಿ. (ರೇಡಿಯೋ, ಮೀಡಿಯಾ, ಇತ್ಯಾದಿ)
  • ಕಾರ್ಯ ಸೆಟ್ಟಿಂಗ್ ಸ್ಕ್ರಿನ್ ಪ್ರವೇಶ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
ವಾಲ್ಯೂಮ್ ಲಿವರ್/ಬಟನ್ (+/-)
  • ಸಿಸ್ಟಮ್ ಸೌಂಡ್ ವಾಲ್ಯೂಮ್ ಹೊಂದಿಸಿ.
ಮ್ಯೂಟ್ ಬಟನ್ ()
  • ಸಿಸ್ಟಮ್ ಸೌಂಡ್ ವಾಲ್ಯೂಮ್ ಅನ್ನು ಮ್ಯೂಟ್ ಅಥವಾ ಅನ್‌ಮ್ಯೂಟ್ ಮಾಡಲು ಬಟನ್ ಒತ್ತಿ.
  • ಮೀಡಿಯಾವನ್ನ ಪ್ಲೇ ಮಾಡುವಾಗ, ಪ್ಲೇಬ್ಯಾಕ್ ಅನ್ನು ವಿರಾಮಗೊಳಿಸಿ ಅಥವಾ ಪುನರಾರಂಭಿಸಿ.
  • ಕರೆ ಸಮಯದಲ್ಲಿ, ಮೈಕ್ರೋಫೋನ್ ಆಫ್ ಮಾಡಲು ಒತ್ತಿ.
ಶೋಧ ಲಿವರ್/ಬಟನ್ ( )
  • ರೇಡಿಯೋ ಕೇಳುತ್ತಿರುವಾಗ, ಮೊದಲೇ ಪಟ್ಟಿಯಲ್ಲಿರುವ ಬ್ರಾಡ್‌ಕಾಸ್ಟಿಂಗ್‌ ಸ್ಟೇಷನ್‌‌ಗಳ ಮಧ್ಯೆ ಬದಲಿಸಿ. ಸ್ಟೇಷನ್ ಹುಡುಕಾಟಕ್ಕಾಗಿ ಒತ್ತಿ ಹಿಡಿದುಕೊಳ್ಳಿ ಅಥವಾ ಫ್ರೀಕ್ವೆನ್ಸಿ ಬದಲಿಸಿ. (ಫಂಕ್ಷನ್ ಬಳಸಲು ಬಟನ್ ಸೆಟ್ಟಿಂಗ್‌ನಲ್ಲಿ ನೀವು ಆಯ್ಕೆ ಮಾಡಬಹುದು.)
  • ಮಾಧ್ಯಮ ಪ್ಲೇ ಮಾಡುವಾಗ, ಟ್ರ್ಯಾಕ್/ಫೈಲ್ ಅನ್ನು ಬದಲಾಯಿಸಿ. ರಿವೈಂಡ್ ಮಾಡಲು ಅಥವಾ ಫಾಸ್ಟ್ ಫಾರ್ವರ್ಡ್ ಮಾಡಲು ಒತ್ತಿ ಹಿಡಿದುಕೊಳ್ಳಿ (Bluetooth ಆಡಿಯೊ ಮೋಡ್ ಹೊರತುಪಡಿಸಿ).
ಆಯ್ಕೆ A
ಕಾಲ್‌/ಆನ್ಸರ್ ಬಟನ್ ()
  • Bluetooth ಮುಖಾಂತರ ಮೊಬೈಲ್ ಫೋನ್ ಅನ್ನು ಸಂಪರ್ಕಿಸಲು ಪ್ರಾರಂಭಿಸಿ.
  • Bluetooth ಫೋನ್ ಸಂಪರ್ಕವನ್ನು ಮಾಡಿದ ನಂತರ, ನಿಮ್ಮ ಕರೆ ಇತಿಹಾಸವನ್ನು ಪ್ರವೇಶಿಸಿ. ತೀರಾ ಇತ್ತೀಚಿನ ಫೋನ್ ಸಂಖ್ಯೆ ಅನ್ನು ಡಯಲ್ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ. ಕರೆ ಬಂದಾಗ, ಕರೆಗೆ ಉತ್ತರಿಸಿ.
  • 3-ವೇ ಕರೆ ಸಮಯದಲ್ಲಿ, ಸಕ್ರಿಯ ಕರೆ ಮತ್ತು ಹೋಲ್ಡ್ ಮಾಡಿರುವ ಕರೆ ನಡುವೆ ಬದಲಾಯಿಸಿ. ಸಿಸ್ಟಮ್ ಮತ್ತು ಮೊಬೈಲ್ ಫೋನ್ ಮಧ್ಯೆ ಕರೆ ಬದಲಾಯಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
ಕಾಲ್ ಎಂಡ್ ಬಟನ್ () (ಅರ್ಹವಾಗಿದ್ದರೆ)
  • ಒಳಬರುವ ಕರೆ ಸಮಯದಲ್ಲಿ, ಕರೆ ಅನ್ನು ತಿರಸ್ಕರಿಸಿ.
  • Bluetooth ಕರೆ ಸಮಯದಲ್ಲಿ: ಕರೆ ಅನ್ನು ಕೊನೆಗೊಳಿಸಲು ಒತ್ತಿ.
ಆಯ್ಕೆ B
ಕಾಲ್‌/ಆನ್ಸರ್ ಬಟನ್ ()
  • Bluetooth ಮುಖಾಂತರ ಮೊಬೈಲ್ ಫೋನ್ ಅನ್ನು ಸಂಪರ್ಕಿಸಲು ಪ್ರಾರಂಭಿಸಿ.
  • Bluetooth ಫೋನ್ ಸಂಪರ್ಕವನ್ನು ಮಾಡಿದ ನಂತರ, ನಿಮ್ಮ ಕರೆ ಇತಿಹಾಸವನ್ನು ಪ್ರವೇಶಿಸಿ. ತೀರಾ ಇತ್ತೀಚಿನ ಫೋನ್ ಸಂಖ್ಯೆ ಅನ್ನು ಡಯಲ್ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
  • ಇನ್‌ಕಮಿಂಗ್ ಕಾಲ್ ಸಮಯದಲ್ಲಿ, ಕಾಲ್‌ಗೆ ಉತ್ತರಿಸಿ.
  • 3-ವೇ ಕರೆ ಸಮಯದಲ್ಲಿ, ಸಕ್ರಿಯ ಕರೆ ಮತ್ತು ಹೋಲ್ಡ್ ಮಾಡಿರುವ ಕರೆ ನಡುವೆ ಬದಲಾಯಿಸಿ.
ಕಾಲ್ ಎಂಡ್ ಬಟನ್ () (ಅರ್ಹವಾಗಿದ್ದರೆ)
  • ಒಳಬರುವ ಕರೆ ಸಮಯದಲ್ಲಿ, ಕರೆಗೆ ಉತ್ತರಿಸಿ.
  • ಕರೆ ಸಮಯದಲ್ಲಿ, ಕರೆ ಅನ್ನು ಕೊನೆಗೊಳಿಸಿ.
ಕಸ್ಟಮ್ ಬಟನ್ () (ಅರ್ಹವಾಗಿದ್ದರೆ)
  • ಕಸ್ಟಮ್ ಕಾರ್ಯವನ್ನು ಬಳಸಿ.
  • ಕಸ್ಟಮ್ ಬಟನ್ (ಸ್ಟೀರಿಂಗ್‌ ವೀಲ್) ಸೆಟ್ಟಿಂಗ್‌ಗಳ ಸ್ಕ್ರೀನ್ ಅನ್ನು ಪ್ರವೇಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.