ಸಿಸ್ಟಮ್ ಅನ್ನು ಆಫ್ ಮಾಡಲಾಗುತ್ತಿದೆ
ಚಾಲನೆ ಮಾಡುವಾಗ ನೀವು ಸಿಸ್ಟಮ್ ಅನ್ನು ಬಳಸಲು ಬಯಸದೇ ಇದ್ದರೆ, ನಿಯಂತ್ರಣ ಫಲಕದಲ್ಲಿ ಪವರ್ ಬಟನ್ ಒತ್ತಿ ಮತ್ತು ಹಿಡಿದುಕೊಂಡು ಸಿಸ್ಟಮ್ ಅನ್ನು ನೀವು ಆಫ್ ಮಾಡಬಹುದು.
- ಸ್ಕ್ರೀನ್ ಮತ್ತು ವಾಯ್ಸ್ ಆಫ್ ಆಗುತ್ತದೆ.
- ಸಿಸ್ಟಮ್ ಅನ್ನು ಮತ್ತೆ ಬಳಸುವುದಕ್ಕೆ, ಪವರ್ ಬಟನ್ ಒತ್ತಿರಿ.
ನೀವು ಎಂಜಿನ್ ಅನ್ನು ಆಫ್ ಮಾಡಿದ ಬಳಿಕ, ಸ್ವಲ್ಪ ಸಮಯದ ನಂತರ ಅಥವಾ ನೀವು ಚಾಲಕನ ಬಾಗಿಲು ತೆರೆದ ಕೂಡಲೇ ಸಿಸ್ಟಮ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ.
- ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ನೀವು ಎಂಜಿನ್ ಅನ್ನು ಆಫ್ ಮಾಡಿದ ಕೂಡಲೇ ಸಿಸ್ಟಮ್ ಆಫ್ ಆಗಬಹುದು.