ಸಿಸ್ಟಮ್ ಅವಲೋಕನ

ಹೋಮ್ ಸ್ಕ್ರೀನ್ ಅನ್ನು ತಿಳಿದುಕೊಳ್ಳಲು


ಹೋಮ್ ಸ್ಕ್ರೀನ್‌ನಿಂದ, ನೀವು ವಿವಿಧ ಕಾರ್ಯಗಳನ್ನು ಪ್ರವೇಶಿಸಬಹುದು.

ಹೋಮ್ ಸ್ಕ್ರೀನ್ ವಿನ್ಯಾಸದೊಂದಿಗೆ ಪರಿಚಿತವಾಗುವುದು

  1. ಆಯ್ಕೆಗಳ ಪಟ್ಟಿ ಅನ್ನು ಪ್ರದರ್ಶಿಸಿ.
  1. ಎಡ ಬದಿ ವಿಜೆಟ್ ಎಡಿಟ್ ಮಾಡಿ: ಎಡ ವಿಜೆಟ್ ನ ಕಾರ್ಯಗಳನ್ನು ಬದಲಾಯಿಸಿ.
  2. ಬಲ ಬದಿ ವಿಜೆಟ್ ಎಡಿಟ್ ಮಾಡಿ: ಬಲ ವಿಜೆಟ್ ನ ಕಾರ್ಯಗಳನ್ನು ಬದಲಾಯಿಸಿ.
  3. ಹೋಮ್ ಐಕಾನ್‌ಗಳನ್ನು ಎಡಿಟ್ ಮಾಡಿ: ನೀವು ಆಗಾಗ್ಗೆ ಹೋಮ್ ಸ್ಕ್ರೀನ್‌ನಲ್ಲಿ ಬಳಸುವ ಮೆನುಗಳಿಗಾಗಿ ಶಾರ್ಟ್ ಕಟ್ ಗಳನ್ನು ಬದಲಾಯಿಸಿ.
  4. ಮ್ಯಾನ್ಯುಯಲ್: QR ಕೋಡ್‌ ಪ್ರದರ್ಶಿಸಿ, ಸಿಸ್ಟಮ್‌ಗೆ ಆನ್‌ಲೈನ್‌ ಬಳಕೆದಾರರ ಕೈಪಿಡಿಗೆ ಪ್ರವೇಶವನ್ನು ಒದಗಿಸುತ್ತದೆ. ಸುರಕ್ಷತೆ ಕಾರಣಗಳಿಗೆ, ಡ್ರೈವಿಂಗ್ ಮಾಡುತ್ತಿರುವಾಗ ಅಥವಾ ಪಾರ್ಕಿಂಗ್ ಬ್ರೇಕ್ ಅನ್ನು ಡಿಸ್‌ಎಂಗೇಜ್ ಮಾಡಿದಾಗ ಅಥವಾ ನಿಷ್ಕ್ರಿಯ ಸ್ಥಿತಿಯಲ್ಲಿರುವಾಗ QR ಕೋಡ್‌ ಅನ್ನು ಅಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
  1. ಪ್ರಸ್ತುತ ಸಮಯ. ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಸಮಯ ಮತ್ತು ದಿನಾಂಕ ಪ್ರದರ್ಶನವು ಬದಲಾಗಬಹುದು. ಸಮಯ ಮತ್ತು ದಿನಾಂಕ ಸೆಟ್ಟಿಂಗ್ ಹಳ ಸ್ಕ್ರೀನ್ ಪ್ರವೇಶಿಸಲು ಒತ್ತಿ. > ಉಲ್ಲೇ ಖಿಸಿ “ದಿನಾಂಕ/ಸಮಯ.”
  1. ಸಿಸ್ಟಮ್‌ ಸ್ಥಿತಿ ಐಕಾನ್‌ಗಳು. ಈ ಮಾರ್ಗದರ್ಶಿಯಲ್ಲಿನ ಸ್ಕ್ರೀನ್ ಶಾರ್ಟ್ ಗಳಲ್ಲಿ ಸ್ಥಿತಿ ಐಕಾನ್‌ಗಳನ್ನು ಸೇರಿಸಲಾಗಿರುವುದಿಲ್ಲ, ಏಕೆಂದರೆ ಸಿಸ್ಟಮ್‌ ಸ್ಥಿತಿ ಅಥವಾ ಮೋಡ್ ಅವಲಂಬಿಸಿ ಅವುಗಳ ನೋಟವು ಭಿನ್ನವಾಗಿರಬಹುದು. > ಉಲ್ಲೇ ಖಿಸಿ “ಸಿಸ್ಟಮ್‌ ಸ್ಥಿತಿ ಐಕಾನ್‌ಗಳು.”
  1. ಎಡ ವಿಜೆಟ್. ಪೂರ್ಣ ಸ್ಕ್ರೀನ್‌ನಲ್ಲಿ ಅನುಗುಣವಾದ ಕಾರ್ಯವನ್ನು ಸಕ್ರಿಯಗೊಳಿಸಲು ಒಒತ್ತಿ. ವಿಜೆಟ್ ಅನ್ನು ಮತ್ತೊಂದಕ್ಕೆ ಬದಲಾಯಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ. > ಉಲ್ಲೇ ಖಿಸಿ “ಹೋಮ್ ಸ್ಕ್ರೀನ್ ವಿಜೆಟ್ ಗಳನ್ನು ಬದಲಾಯಿಸುವುದು.”
  1. ಬಲ ವಿಜೆಟ್. ಪೂರ್ಣ ಸ್ಕ್ರೀನ್‌ನಲ್ಲಿ ಅನುಗುಣವಾದ ಕಾರ್ಯವನ್ನು ಸಕ್ರಿಯಗೊಳಿಸಲು ಒಒತ್ತಿ. ವಿಜೆಟ್ ಅನ್ನು ಮತ್ತೊಂದಕ್ಕೆ ಬದಲಾಯಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ. > ಉಲ್ಲೇ ಖಿಸಿ “ಹೋಮ್ ಸ್ಕ್ರೀನ್ ವಿಜೆಟ್ ಗಳನ್ನು ಬದಲಾಯಿಸುವುದು.”
  1. ಮೆನು ಐಕಾನ್‌ಗಳು. ಆಯ್ದ ಕಾರ್ಯವನ್ನು ಪ್ರವೇಶಿಸಲು ಒತ್ತಿ. ವೆನುವಿನ ಪ್ರಕಾರ ಮತ್ತು ಸ್ಥಳವನ್ನು ಬದಲಾಯಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ. > ಉಲ್ಲೇ ಖಿಸಿ “ಹೋಮ್ ಸ್ಕ್ರೀನ್ ಮೆನು ಐಕಾನ್ಗಳನ್ನು ಬದಲಾಯಿಸುವುದು.”
ಸೂಚನೆ
  • ಮತ್ತೊಂದು ಸ್ಕ್ರೀನ್‌ನಿಂದ ಹೋಮ್ ಸ್ಕ್ರೀನ್ ಸರಿಸಲು, ಒತ್ತಿ .
  • ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಪ್ರದರ್ಶಿಸಲಾದ ಸ್ಕ್ರೀನ್‌ಗಳು ಮತ್ತು ಲಭ್ಯವಿರುವ ಕಾರ್ಯಗಳು ಬದಲಾಗಬಹುದು.

ಹೋಮ್ ಸ್ಕ್ರೀನ್ ವಿಜೆಟ್ ಗಳನ್ನು ಬದಲಾಯಿಸುವುದು

ಹೋಮ್ ಸ್ಕ್ರೀನ್ ಪ್ರದರ್ಶಿಸಲಾದ ವಿಜೆಟ್ ಗಳ ಪ್ರಕಾರಗಳನ್ನು ನೀವು ಬದಲಾಯಿಸಬಹುದು.
  1. ಹೋಮ್ ಸ್ಕ್ರೀನ್‌ನಲ್ಲಿ, ಮೆನು ಮೆನು > ಎಡ ಬದಿ ವಿಜೆಟ್ ಎಡಿಟ್ ಮಾಡಿ ಅಥವಾ ಬಲ ಬದಿ ವಿಜೆಟ್ ಎಡಿಟ್ ಮಾಡಿ.
  1. ಪರ್ಯಾಯವಾಗಿ, ನೀವು ಬದಲಾಯಿಸಲು ಇಚ್ಛಿಸುವ ವಿಜೆಟ್ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
  1. ಬಯಸಿದ ಕಾರ್ಯವನ್ನು ಆರಿಸಿ.
ಸೂಚನೆ
  • ಎಡ ಮತ್ತು ಬಲ ವಿಜೆಟ್ ಗಳಿಗೆ ನೀವು ಒಂದೇ ಕಾರ್ಯವನ್ನು ಹೊಂದಿಸಲು ಸಾಧ್ಯವಿಲ್ಲ.
  • ವಿಜೆಟ್ ಗಾಗಿ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಮರುಸ್ಥಾಪಿಸಲು ಡೀಫಾಲ್ಟ್ ಅನ್ನು ಒತ್ತಿ.

ಹೋಮ್ ಸ್ಕ್ರೀನ್ ಮೆನು ಐಕಾನ್ಗಳನ್ನು ಬದಲಾಯಿಸುವುದು

ನೀವು ಹೋಮ್ ಸ್ಕ್ರೀನ್‌ನಲ್ಲಿ ಮೆನುಗಳ ಪ್ರಕಾರಗಳು ಮತ್ತು ಸ್ಥಳಗಳನ್ನು ಬದಲಾಯಿಸಬಹುದು.
  1. ಹೋಮ್ ಸ್ಕ್ರೀನ್‌ನಲ್ಲಿ, ಮೆನು > ಹೋಮ್ ಐಕಾನ್‌ಗಳನ್ನು ಎಡಿಟ್ ಮಾಡಿ.
  1. ಪರ್ಯಾಯವಾಗಿ, ಮೆನು ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ.
  1. ಮೆನು ಪಟ್ಟಿಯಲ್ಲಿರುವ ಐಕಾನ್ ಅನ್ನು ಒತ್ತಿ ಮತ್ತು ಅದನ್ನು ಸ್ಕ್ರೀನ್ ಕೆಳಭಾಗದಲ್ಲಿರುವ ಐಕಾನ್ ಕ್ಷೇತ್ರಕ್ಕೆ ಎಳೆಯಿರಿ.
  1. ಐಕಾನ್‌ನ ಸ್ಥಳವನ್ನು ಬದಲಾಯಿಸಲು, ಐಕಾನ್ ಕ್ಷೇತ್ರದಲ್ಲಿ ಐಕಾನ್ ಅನ್ನು ಒತ್ತಿ ಮತ್ತು ಅದನ್ನು ಬಯಸಿದ ಸ್ಥಳಕ್ಕೆ ಎಳೆಯಿರಿ.
ಸೂಚನೆ
  • ಎಲ್ಲಾ ಎಲ್ಲ ಮೆನುಗಳು ಐಕಾನ್ ಅನ್ನು ಮತ್ತೊಂದು ಮೆನುಗೆ ಬದಲಾಯಿಸಲಾಗುವುದಿಲ್ಲ. ನೀವು ಅದರ ಸ್ಥಳವನ್ನು ಮಾತ್ರ ಬದಲಾಯಿಸಬಹುದು.
  • ಮೆನುಗಳಿಗಾಗಿ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಮರುಸ್ಥಾಪಿಸಲು ಡೀಫಾಲ್ಟ್ ಅನ್ನು ಒತ್ತಿರಿ.
  • ಹೋಮ್ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾದ ಮೆನುಗಳನ್ನು ಒಮ್ಮೆ ನೀವು ಬದಲಾಯಿಸಿದರೆ, ಕೆಲವು ಕಾರ್ಯಗಳನ್ನು ಹೇಗೆ ಪ್ರವೇಶಿಸಬಹುದು ಅಥವಾ ನಿರ್ವಹಿಸುವುದು ಎಂಬುದರ ಮೇಲೆ ಅದು ಪರಿಣಾಮ ಬೀರಬಹುದು. ಹೋಮ್ ಸ್ಕ್ರೀನ್‌ನಿಂದ ನಿಮಗೆ ಬೇಕಾದ ಕಾರ್ಯವನ್ನು ಎಲ್ಲ ಮೆನುಗಳು ಅದನ್ನು ಪ್ರವೇಶಿಸಲು ಅಥವಾ ನಿರ್ವಹಿಸಲು ಎಲ್ಲಾ ಮೆನುಗಳನ್ನು ಒತ್ತಿ.
  • ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಪ್ರದರ್ಶಿಸಲಾದ ಸ್ಕ್ರೀನ್ ಗಳು ಮತ್ತು ಲಭ್ಯವಿರುವ ಕಾರ್ಯಗಳು ಬದಲಾಗಬಹುದು.