ಸಿಸ್ಟಮ್ ಅವಲೋಕನ

ನೀವು ಪ್ರಾರಂಭಿಸುವ ಮೊದಲು


ಪರಿಚಯ

  • ಐಚ್ಛಿಕ ವಿಶೇಷತೆಗಳನ್ನು ಒಳಗೊಂಡಂತೆ ಈ ಮಾರ್ಗದರ್ಶಿ ಎಲ್ಲಾ ವಾಹನ ಮಾದರಿಗಳಿಗೆ ವಿಶೇಷಣಗಳನ್ನು ಒಳಗೊಂಡಿದೆ, ಮತ್ತು ಸಿಸ್ಟಮ್ ಸಾಫ್ಟ್‌ವೇರ್‌ನ ಇತ್ತೀಚಿನ ಆವೃತ್ತಿ ಅನ್ನು ಆಧರಿಸಿದೆ.
  • ಕಾರ್ಯಕ್ಷಮತೆ ಸುಧಾರಣೆಗಾಗಿ ನಿಮ್ಮ ಸಿಸ್ಟಮ್ ನ ಕಾರ್ಯಗಳು ಮತ್ತು ವಿಶೇಷಣಗಳು ಪೂರ್ವ ಸೂಚನೆ ಇಲ್ಲದೇ ಬದಲಾವಣೆಗೆ ಒಳಪಟ್ಟಿರುತ್ತವೆ.
  • ಈ ಮಾರ್ಗದರ್ಶಿಯಲ್ಲಿ ವಿವರಿಸಲಾದ ಮತ್ತು ಸೇವೆಗಳು ಕಾರ್ಯಕ್ಷಮತೆಯ ಸುಧಾರಣೆಗಾಗಿ ಪೂರ್ವ ಸೂಚನೆ ಇಲ್ಲದೇ ಬದಲಾವಣೆಗೆ ಒಳಪಟ್ಟಿರುತ್ತವೆ. ಸಿಸ್ಟಮ್ ಸಾಫ್ಟ್‌ವೇರ್ ಅನ್ನು ನವೀಕರಿಸಿದರೆ, ಈ ಮಾರ್ಗದರ್ಶಿಯಲ್ಲಿನ ಸ್ಕ್ರೀನ್ ಶಾಟ್ ಗಳು ಸಿಸ್ಟಮ್ ನಲ್ಲಿನ ನಿಜವಾದ ಚಿತ್ರಗಳಿಗಿಂತ ವಿಭಿನ್ನವಾಗಿ ಕಾಣಿಸಬಹುದು.
  • ವೆಬ್ ಕೈಪಿಡಿಯಿಂದ ಬದಲಾಗಿರುವ ಕಾರ್ಯಗಳು ಮತ್ತು ಸೇವೆಗಳ ಬಗ್ಗೆ ನವೀಕೃತ ಮಾಹಿತಿ ಅನ್ನು ನೀವು ವೀಕ್ಷಿಸಬಹುದು.
  • ಈ ಮಾರ್ಗದರ್ಶಿಯಲ್ಲಿ ವಿವರಿಸಲಾದ ಕಾರ್ಯಗಳು ಮತ್ತು ಸೇವೆಗಳು ನಿಮ್ಮ ವಾಹನದಲ್ಲಿ ಒದಗಿಸಿದ ಸೇವೆಗಳಿಗಿಂತ ಭಿನ್ನವಾಗಿರಬಹುದು. ನಿಮ್ಮ ವಾಹನಕ್ಕೆ ಸಂಬಂಧಪಟ್ಟ ನಿಖರವಾದ ಮಾಹಿತಿಗಾಗಿ, ನಿಮ್ಮ ವಾಹನದ ಮಾಲೀಕರ ಕೈಪಿಡಿ ಅಥವಾ ಕ್ಯಾಟಲಾಗ್ ಅನ್ನು ಉಲ್ಲೇಖಿಸಿ.
  • ನಿಮ್ಮ ಸಿಸ್ಟಮ್ ಖರೀದಿಸಿದ ದೇಶದ ಹೊರಗಿನ ಪ್ರದೇಶಗಳಿಗೆ ಸಿಸ್ಟಮ್ ಸಾಫ್ಟ್‌ವೇರ್‌‌ಗೆ ಹೊಂದಿಕೆ ಆಗುವುದಿಲ್ಲ.

ಬಳಕೆದಾರರಿಗೆ ಲಭ್ಯವಿರುವ ಮಾಹಿತಿ

ಕಾರ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕ್ವಿಕ್ ರೆಫರೆನ್ಸ್ ಗೈಡ್ (ಪ್ರಿಂಟ್)
ಘಟಕದ ಹೆಸರುಗಳು ಮತ್ತು ಕಾರ್ಯಗಳನ್ನು ಒಳಗೊಂಡಂತೆ ನಿಮ್ಮ ಸಿಸ್ಟಮ್ ಅನ್ನು ಬಳಸಲು ಈ ಮಾರ್ಗದರ್ಶಿ ಮೂಲಭೂತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಸಿಸ್ಟಮ್ ಅನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿ ಬಳಸಲು, ಬಳಸುವ ಮೊದಲು ಈ ಮಾರ್ಗದರ್ಶಿಯನ್ನು ಓದಿ.
ಕಾರ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಬಳಕೆದಾರರ ಕೈಪಿಡಿ (ವೆಬ್)
ಈ ಮಾರ್ಗದರ್ಶಿಯು ವೈಬ್ ಕೈಪಿಡಿಯಾಗಿದ್ದು, ತ್ವರಿತ ಉಲ್ಲೇಖ ಮಾರ್ಗದರ್ಶಿಯಲ್ಲಿ ಅಥವಾ ಸಿಸ್ಟಮ್‌ನ ಪರದೆಯಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರವೇಶಿಸಬಹುದು. ನಿಮ್ಮ ಸಿಸ್ಟಮ್ ನ ಕಾರ್ಯಗಳನ್ನು ಈ ಮಾರ್ಗದರ್ಶಿ ಪರಿಚಯಿಸುತ್ತದೆ ಮತ್ತು ಅವುಗಳನ್ನು ಹೇಗೆ ಬಳಸುವುದು ಎಂಬುದನ್ನು ವಿವರಿಸುತ್ತದೆ.
ಮನರಂಜನೆ/ಹವಾಮಾನ ಬದಲಾವಣೆ ನಿಯಂತ್ರಕ ಕೈಪಿಡಿ (ವೆಬ್)
ಕಂಟ್ರೋಲ್ ಪ್ಯಾನೆಲ್‌ಗಳನ್ನು ಬದಲಿಸುವುದು ಹೇಗೆ ಎಂಬುದನ್ನು ವಿವರಿಸುವ ಮತ್ತು ಪ್ರತಿ ಬಟನ್‌ನ ಕಾರ್ಯಗಳನ್ನು ಪರಿಚಯಿಸುವ ವೆಬ್ ಕೈಪಿಡಿ ಇದು.

ಈ ಮಾರ್ಗದರ್ಶಿಯಲ್ಲಿ ಬಳಸಲಾದ ಚಿಹ್ನೆಗಳು

ಎಚ್ಚರಿಕೆ
ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಅನ್ನು ಸೂಚಿಸುತ್ತದೆ. ಎಚ್ಚರಿಕೆಗಳನ್ನು ಅನುಸರಿಸಲು ವಿಫಲವಾದರೆ ಸಾವು ಅಥವಾ ಗಂಭೀರವಾದ ವೈಯಕ್ತಿಕ ಗಾಯಕ್ಕೆ ಕಾರಣವಾಗಬಹುದು.
ಎಚ್ಚರಿಕೆ
ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಅನ್ನು ಸೂಚಿಸುತ್ತದೆ. ಎಚ್ಚರಿಕೆಗಳನ್ನು ಅನುಸರಿಸಲು ವಿಫಲವಾದರೆ ವೈಯಕ್ತಿಕ ಗಾಯ ಅಥವಾ ನಿಮ್ಮ ವಾಹನಕ್ಕೆ ಹಾನಿ ಅಥವಾ ಅಸಮರ್ಪಕ ಕಾರ್ಯಕ್ಕೆ ಕಾರಣವಾಗಬಹುದು.
ಸೂಚನೆ
ಅನುಕೂಲಕರ ಬಳಕೆಗಾಗಿ ಸಹಾಯಕವಾದ ಮಾಹಿತಿ ಅನ್ನು ಸೂಚಿಸುತ್ತದೆ.
(ಅರ್ಹವಾಗಿದ್ದರೆ)
ಮಾದರಿ ಅಥವಾ ಟ್ರಿಮ್ ಮಟ್ಟವನ್ನು ಅವಲಂಬಿಸಿ ನಿಮ್ಮ ನಿರ್ದಿಷ್ಟ ವಾಹನದಲ್ಲಿ ಲಭ್ಯವಿಲ್ಲದಿರುವ ಐಚ್ಛಿಕ ವೈಶಿಷ್ಟ್ಯಗಳ ವಿವರಣೆ ಅನ್ನು ಸೂಚಿಸುತ್ತದೆ.
ಈ ಮಾರ್ಗದರ್ಶಿ ಐಚ್ಛಿಕ ವಿಶೇಷಣಗಳನ್ನು ಒಳಗೊಂಡಂತೆ ಎಲ್ಲಾ ವಾಹನ ಮಾದರಿಗಳಿಗೆ ವಿಶೇಷಣಗಳನ್ನು ಒಳಗೊಂಡಿದೆ. ನಿಮ್ಮ ವಾಹನದಲ್ಲಿ ಸಜ್ಜುಗೊಳಿಸದಿರುವ ಅಥವಾ ನಿಮ್ಮ ವಾಹನದ ಮಾದರಿಗೆ ಲಭ್ಯವಿಲ್ಲದ ವೈಶಿಷ್ಟ್ಯಗಳ ವಿವರಣೆ ಅನ್ನು ಇದು ಒಳಗೊಂಡಿರಬಹುದು.

ಸುರಕ್ಷತೆ ಎಚ್ಚರಿಕೆಗಳು

ಸುರಕ್ಷತೆಗಾಗಿ, ಕೆಳಗಿನ ಸೂಚನೆಗಳನ್ನು ಅನುಸರಿಸಿ. ಹಾಗೆ ಮಾಡಲು ವಿಫಲವಾದಲ್ಲಿ ಟ್ರಾಫಿಕ್ ಅಪಘಾತದ ಅಪಾಯವನ್ನು ಹೆಚ್ಚಿಸಬಹುದು. ಇದು ಸಾವು ಅಥವಾ ಗಂಭೀರ ಗಾಯಕ್ಕೆ ಕಾರಣವಾಗಬಹುದು.
ಚಾಲನೆ ಕುರಿತು
ಚಾಲನೆ ಮಾಡುವ ವೇಳೆ ಸಿಸ್ಟಮ್ ಅನ್ನು ನಿರ್ವಹಿಸಬೇಡಿ.
  • ಗೊಂದಲದಲ್ಲಿದ್ದಾಗ ಚಾಲನೆ ಮಾಡುವುದರಿಂದ ವಾಹನ ನಿಯಂತ್ರಣವನ್ನು ಕಳೆದುಕೊಳ್ಳಬಹುದು, ಇದು ಅಪಘಾತ, ತೀವ್ರ ವೈಯಕ್ತಿಕ ಗಾಯ ಅಥವಾ ಸಾವಿಗೆ ಕಾರಣವಾಗಬಹುದು. ಚಾಲಕನ ಪ್ರಾಥಮಿಕ ಜವಾಬ್ದಾರಿ ಎಂದರೆ ವಾಹನದ ಸುರಕ್ಷಿತ ಮತ್ತು ಕಾಮೂನು ಕಾರ್ಯಾಚರಣೆಯಾಗಿದೆ, ಮತ್ತು ಈ ಜವಾಬ್ದಾರಿಯಿಂದ ಚಾಲಕನ ಗಮನವನ್ನು ಬೇರೆಡೆಗೆ ಸೆಳೆಯುವ ಯಾವುದೇ ಹ್ಯಾಂಡ್ಹೆಲ್ಡ್ ಸಾಧನಗಳು, ಉಪಕರಣಗಳು ಅಥವಾ ವಾಹನ ವ್ಯವಸ್ಥೆಗಳನ್ನು ವಾಹನದ ಕಾರ್ಯಾಚರಣೆಯ ಸಮಯದಲ್ಲಿ ಎಂದಿಗೂ ಬಳಸಬಾರದು.
ಚಾಲನೆ ಮಾಡುವಾಗ ಸ್ಕ್ರೀನ್‌ನೋಡುವುದನ್ನು ತಪ್ಪಿಸಿ.
  • ಗೊಂದಲದಲ್ಲಿ ಚಾಲನೆ ಮಾಡುವುದು ಸಂಚಾರ ಅಪಘಾತಕ್ಕೆ ಕಾರಣವಾಗಬಹುದು.
  • ಬಹು ಕಾರ್ಯಾಚರಣೆಗಳ ಅಗತ್ಯವಿರುವ ಕಾರ್ಯಗಳನ್ನು ಬಳಸುವ ಮುನ್ನ ನಿಮ್ಮ ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ.
ನಿಮ್ಮ ಮೊಬೈಲ್ ಫೋನ್ ಬಳಸುವ ಮೊದಲು ನಿಮ್ಮ ವಾಹನವನ್ನು ಮೊದಲು ನಿಲ್ಲಿಸಿ.
  • ಚಾಲನೆ ಮಾಡುವ ವೇಳೆ ಫೋನ್ ಬಳಸುವುದರಿಂದ ಸಂಚಾರ ಅಪಘಾತಕ್ಕೆ ಕಾರಣವಾಗಬಹುದು.
  • ಅಗತ್ಯವಿದ್ದರೆ, ಕರೆಗಳನ್ನು ಮಾಡುವುದಕ್ಕೆ ಮತ್ತು ಕರೆ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು Bluetooth ಹ್ಯಾಂಡ್ ಫ್ರೀ ವೈಶಿಷ್ಟ್ಯವನ್ನು ಬಳಸಿ.
ಬಾಹ್ಯ ಸೌಂಡ್‌ಗಳನ್ನು ಕೇಳಲು ವಾಲ್ಯೂಮ್ ಅನ್ನು ಸಾಕಷ್ಟು ಕಡಿಮೆ ಇರಿಸಿ.
  • ಬಾಹ್ಯ ಸೌಂಡ್ ‌ಗಳನ್ನು ಕೇಳುವ ಸಾಮರ್ಥ್ಯವಿಲ್ಲದೇ ಚಾಲನೆ ಮಾಡುವುದು ಸಂಚಾರ ಅಪಘಾತಕ್ಕೆ ಕಾರಣವಾಗಬಹುದು.
  • ದೀರ್ಘಕಾಲದವರೆಗೆ ದೊಡ್ಡ ಸೌಂಡ್ ಅನ್ನು ಕೇಳುವುದರಿಂದ ಶ್ರವಣ ದೋಷ ಉಂಟಾಗುತ್ತದೆ.
ಸಿಸ್ಟಮ್ ನಿರ್ವಹಿಸುವ ಕುರಿತು
ಸಿಸ್ಟಮ್ ಅನ್ನು ವಿಭಜಿಸಬೇಡಿ ಅಥವಾ ಮಾರ್ಪಡಿಸಬೇಡಿ.
  • ಹಾಗೇ ಮಾಡುವುದರಿಂದ ಅಪಘಾತ, ಬೆಂಕಿ ಅಥವಾ ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು.
ಲಿಕ್ವಿಡ್‌ಗಳು ಮತ್ತು ವಿದೇಶಿ ವಸ್ತುಗಳನ್ನು ಸಿಸ್ಟಮ್ ಗೆ ಪ್ರವೇಶಿಸಲು ಅನುಮತಿಸಬೇಡಿ.
  • ಹಾನಿಕಾರಕ ಹೊಗೆ, ಬೆಂಕಿ ಅಥವಾ ಸಿಸ್ಟಮ್ ಅಸಮರ್ಪಕ ಕಾರ್ಯಕ್ಕೆ ಲಿಕ್ವಿಡ್‌ಗಳು ಮತ್ತು ವಿದೇಶಿ ವಸ್ತುಗಳು ಕಾರಣವಾಗಬಹುದು.
ಆಡಿಯೊ ಔಟ್‌ಪುಟ್ ಅಥವಾ ಡಿಸ್‌ಪ್ಲೇ ಇಲ್ಲದಿರುವಂತಹ ಸಿಸ್ಟಮ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಅದನ್ನು ಬಳಕೆ ಮಾಡುವುದನ್ನು ನಿಲ್ಲಿಸಿ.
  • ಸಿಸ್ಟಮ್ ಅಸರ್ಮಪಕವಾಗಿ ಕಾರ್ಯ ನಿರ್ವಸುತ್ತಿರುವಾಗ ನೀವು ಅದನ್ನು ಬಳಸುವುದನ್ನು ಮುಂದುವರಿಸಿದರೆ, ಇದು ಬೆಂಕಿ, ವಿದ್ಯುತ್ ಆಘಾತ ಅಥವಾ ಸಿಸ್ಟಮ್ ವೈಫಲ್ಯಕ್ಕೆ ಕಾರಣವಾಗಬಹುದು.
ಸೂಚನೆ
ಸಿಸ್ಟಮ್ ನಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ, ನಿಮ್ಮ ಖರೀದಿ ಸ್ಥಳ ಅಥವಾ ಡೀಲರ್ ಅನ್ನು ಸಂಪರ್ಕಿಸಿ.

ಸುರಕ್ಷತೆ ಮುನ್ನೆಚ್ಚರಿಕೆಗಳು

ಸುರಕ್ಷತೆಗಾಗಿ, ಕೆಳಗಿನ ಸೂಚನೆಗಳನ್ನು ಅನುಸರಿಸಿ. ಹಾಗೆ ಮಾಡಲು ವಿಫಲವಾದರೆ ವೈಯಕ್ತಿಕ ಗಾಯ ಅಥವಾ ಸಿಸ್ಟಮ್‌ಗೆ ಹಾನಿಯಾಗಬಹುದು.
ಸಿಸ್ಟಮ್ ನಿರ್ವಹಿಸುವ ಕುರಿತು
ಇಂಜಿನ್ ಚಾಲನೆಯಲ್ಲಿರುವ ಸಿಸ್ಟಮ್ ಅನ್ನು ಬಳಸಿ.
  • ಇಂಜಿನ್ ಅನ್ನು ನಿಲ್ಲಿಸಿದಾಗ ದೀರ್ಘಕಾಲದವರೆಗೆ ಸಿಸ್ಟಮ್ ಬಳಸುವುದರಿಂದ ಬ್ಯಾಟರಿ ಡಿಸ್ಚಾರ್ಜ್ ಮಾಡಬಹುದು.
ಅನುಮೋದಿಸದ ಉತ್ಪನ್ನಗಳನ್ನು ಸ್ಥಾಪಿಸಬೇಡಿ.
  • ಸಿಸ್ಟಮ್ ಬಳಸುವಾಗ ಅನುಮೋದಿಸದ ಉತ್ಪನ್ನಗಳನ್ನು ಬಳಸುವುದರಿಂದ ದೋಷ ಉಂಟಾಗಬಹುದು.
  • ಅನುಮೋದಿಸದ ಉತ್ಪನ್ನಗಳನ್ನು ಸ್ಥಾಪಿಸುವುದರಿಂದ ಉಂಟಾಗುವ ಸಿಸ್ಟಮ್ ದೋಷಗಳು ಖಾತರಿಯ ಅಡಿಯಲ್ಲಿ ಒಳಗೊಂಡಿರುವುದಿಲ್ಲ.
ಸಿಸ್ಟಮ್ ನಿರ್ವಹಿಸುವ ಕುರಿತು
ಸಿಸ್ಟಮ್‌ಗೆ ಅತಿಯಾದ ಬಲವನ್ನು ಅನ್ವಯಿಸಬೇಡಿ.
  • ಸ್ಕ್ರಿನ್ ಮೇಲೆ ಅತಿಯಾದ ಒತ್ತಡವು LCD ಪ್ಯಾನೆಲ್ ಅಥವಾ ಟಚ್ ಪ್ಯಾನಲ್ ಅನ್ನು ಹಾನಿಗೊಳಿಸಬಹುದು.
ಸ್ಕ್ರಿನ್ ಅಥವಾ ಬಟನ್ ಫಲಕವನ್ನು ಸ್ವಚ್ಛಗೊಳಿಸುವಾಗ, ಇಂಜಿನ್‌ನಿಲ್ಲಿಸಲು ಮತ್ತು ಮೃದುವಾದ, ಒಣ ಬಟ್ಟೆ ಬಳಸುವುದನ್ನು ಖಚಿತಪಡಿಸಿಕೊಳ್ಳಿ.
  • ಒರಟಾಗಿರುವ ಬಟ್ಟೆಯಿಂದ ಸ್ಕ್ರಿನ್ ಅಥವಾ ಗುಂಡಿಗಳನ್ನು ಸ್ವಚ್ಛಗೊಳಿಸುವುದು ಅಥವಾ ದ್ರಾವಕಗಳನ್ನು (ಅಲ್ಕೋಹಾಲ್, ಬೆಂಜೀನ್, ಪೇಂಟ್ ತೆಳುಗೊಳಿಸುವಿಕೆ, ಇತ್ಯಾದಿ) ಬಳಸಿ ಮೇಲ್ಮೆಯನ್ನು ಸ್ಕ್ರಾಚ್ ಮಾಡಬಹುದು ಅಥವಾ ರಾಸಾಯನಿಕವಾಗಿ ಹಾನಿಗೊಳಿಸಲುಬಹುದು.
ನೀವು ಫ್ಯಾನ್ ಲೌವ್ರೆಗೆ ದ್ರವ-ರೀತಿಯ ಏರ್ ಫ್ರೆಶ್ನರ್ ಅನ್ನು ಲಗತ್ತಿಸಿದರೆ, ಹರಿಯುವ ಗಾಳಿಯಿಂದಾಗಿ ಸಿಸ್ಟಮ್ ಅಥವಾ ಲೌವ್ರೆ ಮೇಲ್ಮೈ ವಿರೂಪಗೊಳ್ಳಬಹುದು.
ಸೂಚನೆ
ಸಿಸ್ಟಮ್ ನಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ, ನಿಮ್ಮ ಖರೀದಿ ಸ್ಥಳ ಅಥವಾ ಡೀಲರ್ ಅನ್ನು ಸಂಪರ್ಕಿಸಿ.