ಸೆಟ್ಟಿಂಗ್‌ಗಳು

ಸಾಧನ ಸಂಪರ್ಕ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಲಾಗುತ್ತಿದೆ


ನೀವು Bluetooth ಸಾಧನಗಳನ್ನು ನಿರ್ವಹಿಸಬಹುದು ಅಥವಾ ನಿಮ್ಮ Bluetooth ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಬಹುದು. ಸಿಸ್ಟಮ್‌ ಸ್ಕ್ರೀನ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ ಆಪ್ ಗಳನ್ನು ಕಂಟ್ರೋಲ್ ಮಾಡಲು ನೀವು ಫೋನ್ ಪ್ರೊಜೆಕ್ಷನ್ ಅನ್ನು ಸಹ ಸಕ್ರಿಯಗೊಳಿಸಬಹುದು.
ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಪ್ರದರ್ಶಿಸಲಾದ ಸ್ಕ್ರೀನ್‌ಗಳು ಮತ್ತು ಲಭ್ಯವಿರುವ ಆಯ್ಕೆಗಳು ಬದಲಾಗಬಹುದು.
ಹೋಮ್ ಸ್ಕ್ರೀನ್‌ನಲ್ಲಿ, ಎಲ್ಲ ಮೆನುಗಳು > ಸೆಟ್ಟಿಂಗ್‌ಗಳು > ಸಾಧನ ಸಂಪರ್ಕ ಒತ್ತಿ ಮತ್ತು ಬದಲಾಯಿಸಲು ಆಯ್ಕೆಯನ್ನು ಆರಿಸಿ.

ಬ್ಲೂಟೂತ್

ನೀವು Bluetooth ಸಂಪರ್ಕಗಳಿಗಾಗಿ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು.
ಸೂಚನೆ
ಮೊಬೈಲ್ ಫೋನ್ ಅನ್ನು ಸಿಸ್ಟಮ್‌ಗೆ ಸಂಪರ್ಕಿಸಿದಾಗ ಮಾತ್ರ ಕೆಲವು ಆಯ್ಕೆಗಳನ್ನು ಪ್ರದರ್ಶಿಸಲಾಗುತ್ತದೆ.

ಬ್ಲೂಟೂತ್‌ ಸಂಪರ್ಕಗಳು

ನಿಮ್ಮ ಸಿಸ್ಟಮ್‌ನೊಂದಿಗೆ ನೀವು ಹೊಸ Bluetooth ಸಾಧನಗಳನ್ನು ಜೋಡಿಸಬಹುದು ಅಥವಾ ಜೋಡಿಸಲಾದ ಸಾಧನವನ್ನು ಸಂಪರ್ಕಿಸಬಹುದು ಅಥವಾ ಸಂಪರ್ಕ ಕಡಿತಗೊಳಿಸಬಹುದು. ನೀವು ಜೋಡಿಸಲಾದ ಸಾಧನಗಳನ್ನು ಸಹ ಅಳಿಸಬಹುದು.

ಸ್ವಯಂಚಾಲಿತ ಸಂಪರ್ಕಕ್ಕೆ ಆದ್ಯತೆ (ಅರ್ಹವಾಗಿದ್ದರೆ)

ನಿಮ್ಮ ಸಿಸ್ಟಮ್‌ ಆನ್ ಮಾಡಿದಾಗ ಸ್ವಯಂಚಾಲಿತವಾಗಿ ಸಂಪರ್ಕಿಸಲು ನೀವು ಜೋಡಿಯಾಗಿರುವ ಸಾಧನಗಳ ಆದ್ಯತೆ ಅನ್ನು ಹೊಂದಿಸಬಹುದು.

ಗೌಪ್ಯತೆ ಮೋಡ್ (ಅರ್ಹವಾಗಿದ್ದರೆ)

ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ನೀವು ಗೌಪ್ಯತೆ ಮೋಡ್ ಅನ್ನು ಸಕ್ರಿಯಗೊಳಿಸಬಹುದು. ಗೌಪ್ಯತೆ ಮೋಡ್ ನಲ್ಲಿ, ವೈಯಕ್ತಿಕ ಡೇಟಾವನ್ನು ಪ್ರದರ್ಶಿಸಲಾಗುವುದಿಲ್ಲ.

ಬ್ಲೂಟೂತ್‌ ಸಿಸ್ಟಂ ಮಾಹಿತಿ

ನಿಮ್ಮ ಸಿಸ್ಟಮ್‌ನ Bluetooth ಮಾಹಿತಿಯನ್ನು ವೀಕ್ಷಿಸಬಹುದು ಅಥವಾ ಸಂಪಾದಿಸಬಹುದು.

ರಿಸೆಟ್ ಮಾಡಿ (ಅರ್ಹವಾಗಿದ್ದರೆ)

ನೀವು ಎಲ್ಲಾ ಜೋಡಿಸಲಾದ Bluetooth ಸಾಧನಗಳನ್ನು ಅಳಿಸಬಹುದು ಮತ್ತು ನಿಮ್ಮ Bluetooth ಸೆಟ್ಟಿಂಗ್‌ಗಳನ್ನು ಡೀಫಾಲ್ಟ್ ಮೌಲ್ಯಗಳಿಗೆ ಮರುಹೊಂದಿಸಬಹುದು. Bluetooth ಸಾಧನಗಳಿಗೆ ಸಂಬಂಧಿಸಿದ ಎಲಲ್ ಡೇಟಾವನ್ನು ಅಳಿಸಲಾಗುತ್ತದೆ.

Android Auto (ಅರ್ಹವಾಗಿದ್ದರೆ)

ನಿಮ್ಮ Android ಸ್ಮಾರ್ಟ್‌ಫೋನ್‌ ಅನ್ನು ನಿಮ್ಮ ಸಿಸ್ಟಮ್‌ಗೆ ಸಂಪರ್ಕಿಸಲು ನೀವು Android Auto ಸಕ್ರಿಯಗೊಳಿಸಬಹುದು.

Apple CarPlay (ಅರ್ಹವಾಗಿದ್ದರೆ)

ನಿಮ್ಮ ಸಿಸ್ಟಮ್‌ಗೆ ನಿಮ್ಮ iPhone ಅನ್ನು ಸಂಪರ್ಕಿಸಲು ನೀವು Apple CarPlay ಅನ್ನು ಸಕ್ರಿಯಗೊಳಿಸಬಹುದು.

ಫೋನ್ ಪ್ರೊಜೆಕ್ಷನ್ (ಅರ್ಹವಾಗಿದ್ದರೆ)

ನೀವು ಫೋನ್ ಪ್ರೊಜೆಕ್ಷನ್ ಸಂಪರ್ಕ ಸೆಟ್ಟಿಂಗ್‌ಗಳನ್ನು ಮಾರ್ಪಡಿಸಬಹುದು ಮತ್ತು ವೈರ್‌ಲೆಸ್ ಫೋನ್ ಪ್ರೊಜೆಕ್ಷನ್‌ಗಾಗಿ ನಿಮ್ಮ ಸಿಸ್ಟಮ್‌ನೊಂದಿಗೆ ಸ್ಮಾರ್ಟ್‌ಫೋನ್‌‌ಗಳನ್ನು ಜೋಡಿಸಬಹುದು.