ಒಂದು ಮಾರ್ಗವನ್ನು ಸುಲಭವಾಗಿ ಕಂಡುಕೊಳ್ಳುವುದು

ಎಚ್ಚರಿಕೆ
ಗೊಂದಲಕ್ಕೊಳಗಾಗಿರುವಾಗ ಚಾಲನೆ ಮಾಡುವುದರಿಂದ ವಾಹನದ ನಿಯಂತ್ರಣ ತಪ್ಪಬಹುದು, ಸಂಭಾವ್ಯತಃ ಒಂದು ಅಪಘಾತ, ಗಂಭೀರ ವೈಯಕ್ತಿಕ ಗಾಯ ಅಥವಾ ಸಾವಿಗೆ ಕಾರಣವಾಗಬಹುದು. ಸುರಕ್ಷಿತ ಮತ್ತು ಕಾನೂನುಬದ್ಧವಾಗಿ ವಾಹನ ಚಾಲನೆ ಮಾಡುವುದು ಡ್ರೈವರ್ ಪ್ರಾಥಮಿಕ ಜವಾಬ್ದಾರಿಯಾಗಿದೆ ಮತ್ತು ಈ ಜವಾಬ್ದಾರಿಯಿಂದ ಡ್ರೈವರ್ ಗಮನವನ್ನು ಬೇರೆಡೆಗೆ ಸೆಳೆಯುವ ಯಾವುದೇ ಹ್ಯಾಂಡ್‌ಹೆಲ್ಡ್ ಸಾಧನಗಳು, ಸಲಕರಣೆಗಳು ಅಥವಾ ವಾಹನದ ಸಿಸ್ಟಂಗಳನ್ನು ವಾಹನ ಚಲಾಯಿಸುತ್ತಿರುವಾಗ ಎಂದಿಗೂ ಬಳಸಬಾರದು.
- ಎಲ್ಲ ಮೆನುಗಳ ಸ್ಕ್ರೀನ್‌ನಲ್ಲಿ, ನ್ಯಾವಿಗೇಶನ್ ▶ ಹುಡುಕಿಒತ್ತಿ.
- ಹುಡುಕಿ ಪರದೆಯನ್ನು ಪ್ರದರ್ಶಿಸಲು ಕಂಟ್ರೋಲ್ ಪ್ಯಾನೆಲ್‌ನಲ್ಲಿ [NAV] ಅಥವಾ [NAVI] ಬಟನ್ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
- ಸ್ಥಳದ ಹೆಸರು, ವಿಳಾಸ, ಅಥವಾ ನಿರ್ದೇಶಾಂಕಗಳಂತಹ ಸ್ಥಳ ಮಾಹಿತಿಯನ್ನು ನಮೂದಿಸಿ ಮತ್ತು ನಂತರ OK ಒತ್ತಿ.
- ಹುಡುಕಾಟ ಫಲಿತಾಂಶ ಪಟ್ಟಿಯಿಂದ ಒಂದು ಸ್ಥಳವನ್ನು ಆಯ್ಕೆ ಮಾಡಿ.
- ಪಟ್ಟಿಯಲ್ಲಿನ ಸ್ಥಳವನ್ನು ನೀವು ಮುನ್ನೋಟ ಸ್ಕ್ರೀನ್‌ನಲ್ಲಿ ನೋಡಬಹುದು.
- ವಿಭಿನ್ನ ಅನುಕ್ರಮದಲ್ಲಿ ಫಲಿತಾಂಶಗಳನ್ನು ವಿಂಗಡಣೆ ಮಾಡಲು, ಹುಡುಕಾಟ ಬಾಕ್ಸ್ ಪಕ್ಕದಲ್ಲಿರುವ ಬಟನ್ ಒತ್ತಿ.
- ಒಂದು ತಲುಪುವ ಸ್ಥಳ ಅನ್ನು ಸೆಟ್ ಮಾಡಿದಾಗ ಟೂರ್ ಪಾಯಿಂಟ್ ಸೇರಿಸಿ ಬಟನ್ ಕಾಣಿಸುತ್ತದೆ.
- ತಲುಪುವ ಸ್ಥಳ ಸ್ಥಳವನ್ನು ಪರೀಕ್ಷಿಸಿ ಮತ್ತು ನಂತರ ಡೆಸ್ಟಿನೇಶನ್ ಎಂದು ಹೊಂದಿಸಿ ಒತ್ತಿ.
- ನೀವು ಸ್ಕ್ರೀನ್‌ನ ಕೆಳಗಿನ ಬಲಭಾಗದಲ್ಲಿ ಒತ್ತಿದರೆ ಪಾರ್ಕಿಂಗ್, ಒತ್ತಿದರೆ, ಪಾರ್ಕಿಂಗ್ ಸ್ಥಳಗಳನ್ನು ಮ್ಯಾಪ್ ಸ್ಕ್ರೀನ್ನ ಲ್ಲಿ ಪ್ರದರ್ಶಿಸಲಾಗುತ್ತದೆ.
- ಒಂದು ಮಾರ್ಗವನ್ನು ಆಯ್ಕೆ ಮಾಡಿ ಮತ್ತು ಮಾರ್ಗದರ್ಶನ ಆರಂಭಿಸಿ ಒತ್ತಿ.
- ಸರ್ವರ್ ಆಧರಿಸಿ ಹುಡುಕಾಟ ನಡೆಸುವಾಗ, ನೈಜ ಸಮಯದ ಟ್ರಾಫಿಕ್ ಪರಿಸ್ಥಿತಿಗಳನ್ನು ಒಳಗೊಂಡ ಮಾರ್ಗದ ಮಾರ್ಗದರ್ಶವನ್ನು ಇದು ಒದಗಿಸುತ್ತದೆ.
ಮಾರ್ಗದ ಕುರಿತ ಮಾರ್ಗದರ್ಶನ
ಸಿಸ್ಟಂನಲ್ಲಿ ಎರಡು ರೀತಿಯ ನ್ಯಾವಿಗೇಶನ್ ಮಾರ್ಗದ ಮಾರ್ಗದರ್ಶನಗಳು ಸಾಧ್ಯವಿದೆ.
- • ಸರ್ವರ್ ಆಧರಿತ ನ್ಯಾವಿಗೇಶನ್ ಮಾರ್ಗದರ್ಶನ
- • ಆನ್-ಬೋರ್ಡ್ ನ್ಯಾವಿಗೇಶನ್ ಮಾರ್ಗದರ್ಶನ
ಸರ್ವರ್ ಆಧರಿತ ನ್ಯಾವಿಗೇಶನ್ ಮಾರ್ಗದರ್ಶನ
ಒಂದು ವೇಳೆ ನಮ್ಮ ಸಿಸ್ಟಂ ಟೆಲಿಮ್ಯಾಟಿಕ್ಸ್ ಅಪ್ಲಿಕೇಶನ್‌ಗೆ ಕಾನ್ಫಿಗರ್ ಆಗಿದ್ದರೆ, ಸರ್ವರ್ ಆಧರಿತ ನ್ಯಾವಿಗೇಶನ್ ಮಾರ್ಗದರ್ಶನ ಕಾರ್ಯನಿರ್ವಹಿಸುತ್ತದೆ. ಸಿಸ್ಟಂಗೆ ನೆಟ್‌ವರ್ಕ್ ಸಂಪರ್ಕ ಲಭ್ಯವಿದ್ದಾಗ, ಸಂಚಾರ ಬ್ಲಾಕೇಜ್‌ಗಳು, ವರದಿ ಮಾಡಲ್ಪಟ್ಟ ಅಪಘಾತಗಳು, ಪಾಟ್‌ಹೋಲ್‌ಗಳ ಮಾಹಿತಿ ಮುಂತಾದ ಮಾರ್ಗದ ಮಾಹಿತಿಯನ್ನು ಮ್ಯಾಪ್‌ನಲ್ಲಿ ಸೂಚಿಸಲು Kia ಸರ್ವರ್‌ನಿಂದ ಇನ್ಫೋಟೇನ್‌ಮೆಂಟ್ ಸಿಸ್ಟಂಗೆ ವರದಿ ಮಾಡಬಹುದು.
- ನಕ್ಷೆಯ ಸ್ಕ್ರೀನ್‌ನಿಂದ, ಸ್ಕ್ರೀನ್ ಅನ್ನು ಎಳೆಯಿರಿ ಮತ್ತು ಇಚ್ಛೆಯ ಸ್ಥಳದಿಂದ ಡೆಸ್ಟಿನೇಶನ್ ಎಂದು ಹೊಂದಿಸಿ ಅನ್ನು ಒತ್ತಿ.
ಗುರಿಯ ಸ್ಥಳಕ್ಕೆ ಒಂದು ಸಂಪರ್ಕಿತ ಮಾರ್ಗವನ್ನು ಬಳಸಲು ಒಂದು ವಿನಂತಿಯನ್ನು ಮಾಡಲಾಗುತ್ತದೆ.
- ಸಂಪರ್ಕಿತ ರೂಟಿಂಗ್ ಪೂರ್ಣಗೊಂಡ ನಂತರ ಮಾರ್ಗದರ್ಶನ ಆರಂಭಿಸಿ ಒತ್ತಿ.
- ಸರ್ವರ್‌ಗೆ ಸಂಪರ್ಕಿತಗೊಂಡಾಗ, ಕೆಳಗಿನ ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ.
- ಸರ್ವರ್‌ನೊಂದಿಗೆ ಸಂಪರ್ಕಿತಗೊಳ್ಳಲು ಸಿಸ್ಟಂ ವಿಫಲಗೊಂಡಲ್ಲಿ, ಕೆಳಗಿನ ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ, ನಂತರ ಆನ್-ಬೋರ್ಡ್ ನ್ಯಾವಿಗೇಶನ್ ಆರಂಭಗೊಳ್ಳುತ್ತದೆ.
ಆನ್-ಬೋರ್ಡ್ ನ್ಯಾವಿಗೇಶನ್ ಮಾರ್ಗದರ್ಶನ
ಒಂದು ವೇಳೆ ನಮ್ಮ ಸಿಸ್ಟಂ ಟೆಲಿಮ್ಯಾಟಿಕ್ಸ್ ಅಪ್ಲಿಕೇಶನ್‌ಗೆ ಕಾನ್ಫಿಗರ್ ಆಗಿಲ್ಲದಿದ್ದರೆ, ಆಗ ಆನ್-ಬೋರ್ಡ್ ನ್ಯಾವಿಗೇಶನ್ ಕಾರ್ಯನಿರ್ವಹಿಸುತ್ತದೆ. ಈ ಮಾರ್ಗದ ಮಾರ್ಗದರ್ಶನದಲ್ಲಿ, ಮ್ಯಾಪ್ ಡೇಟಾ ಬೇಸ್‌ನಲ್ಲಿ ಮುಂಚಿತವಾಗಿ ಉಳಿಸಿದ ಸಿಸ್ಟಂನ ಮಾಹಿತಿಯಿಂದ ಮಾರ್ಗದ ಮಾರ್ಗದರ್ಶನವನ್ನು ಲೋಡ್ ಮಾಡಲಾಗುತ್ತದೆ.
- ನಕ್ಷೆಯ ಸ್ಕ್ರೀನ್‌ನಿಂದ, ಸ್ಕ್ರೀನ್ ಅನ್ನು ಎಳೆಯಿರಿ ಮತ್ತು ಇಚ್ಛೆಯ ಸ್ಥಳದಿಂದ ಡೆಸ್ಟಿನೇಶನ್ ಎಂದು ಹೊಂದಿಸಿ ಅನ್ನು ಒತ್ತಿ.
ಗುರಿಯ ಸ್ಥಳಕ್ಕೆ ಒಂದು ಹುಡುಕಾಟದ ಮಾರ್ಗವನ್ನು ಬಳಸಲು ಒಂದು ವಿನಂತಿಯನ್ನು ಮಾಡಲಾಗುತ್ತದೆ.
- ರೂಟ್ ಹುಡುಕಾಟವು ಪೂರ್ಣಗೊಂಡ ನಂತರ, ಮಾರ್ಗದರ್ಶನ ಆರಂಭಿಸಿ ಒತ್ತಿ.
- ರೂಟ್ ಮಾರ್ಗದರ್ಶನ ಆರಂಭಗೊಳ್ಳುತ್ತಿದ್ದಂತೆ, ಕೆಳಗಿನ ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ.

ಎಚ್ಚರಿಕೆ
ವಾಹನದ ಸ್ಥಳ ಆಧರಿಸಿ, ಮ್ಯಾಪ್‌ನಲ್ಲಿರುವ ಮಾಹಿತಿಯು ನೈಜ ರಸ್ತೆ ಪರಿಸ್ಥಿತಿಗಳಿಗಿಂತ ಭಿನ್ನವಾಗಿರಬಹುದು.
- • ಡಿಜಿಟಲೀಕರಿಸಿದ ರಸ್ತೆಗಳು ನೈಜ ರಸ್ತೆಗಳಿಗೆ ಸಾಮ್ಯತೆ ಹೊಂದಿಲ್ಲದಿರಬಹುದು. ಮಾರ್ಗದರ್ಶನವು ನೈಜ ಮಾರ್ಗಕ್ಕೆ ಹೋಲಿಕೆಯಾಗದಿದ್ದಾಗ, ನೈಜ ರಸ್ತೆ ಪರಿಸ್ಥಿತಿಗಳಿಗೆ ಅನುಸಾರವಾಗಿ ವಾಹನವನ್ನು ಚಲಾಯಿಸಿ.
- • ರಸ್ತೆ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ನೈಜ ಮಾರ್ಗಕ್ಕಿಂತ ಭಿನ್ನವಾದ ಮಾರ್ಗದರ್ಶನವನ್ನು ಸಿಸ್ಟಂ ಒದಗಿಸಬಹುದು. ಮಾರ್ಗದರ್ಶನವು ನೈಜ ಮಾರ್ಗಕ್ಕೆ ಹೋಲಿಕೆಯಾಗದಿದ್ದಾಗ, ಸಂಚಾರ ನಿಯಮಗಳನ್ನು ಪಾಲಿಸುತ್ತ ನೈಜ ರಸ್ತೆ ಪರಿಸ್ಥಿತಿಗಳಿಗೆ ಅನುಸಾರವಾಗಿ ವಾಹನವನ್ನು ಚಲಾಯಿಸಿ. ನೈಜ ಮಾರ್ಗಕ್ಕೆ ಹೋಲಿಕೆಯಾಗುವ ವಲಯಕ್ಕೆ ವಾಹನ ತಲುಪಿದಾಗ, ಮಾರ್ಗದ ಕುರಿತು ಸಿಸ್ಟಂ ಸರಿಯಾಗಿ ಮಾರ್ಗದರ್ಶನ ನೀಡುತ್ತದೆ.
- ಈ ಕೆಳಗಿನ ಸಂದರ್ಭಗಳಲ್ಲಿ ವಾಹನದ ಸ್ಥಾನ ಸರಿಯಾಗಿ ಡಿಸ್‌ಪ್ಲೇ ಆಗದಿರಬಹುದು:
- ವಾಹನವು Y-ವಿನ್ಯಾಸದ ಅಥವಾ ಕಿರಿದಾದ ಕೋನಗಳ ಸುತ್ತು ಬಳಸಿನ ರಸ್ತೆಯಲ್ಲಿ ಸಾಗುತ್ತಿದೆ.
- ವಾಹನವು ಇನ್ನೊಂದು ರಸ್ತೆಗೆ ಬಹಳ ಸಮೀಪದಲ್ಲಿ ಸಾಗುತ್ತಿದೆ.
- ಸುತ್ತಮುತ್ತ ಬಹಳಷ್ಟು ಎತ್ತರದ ಕಟ್ಟಡಗಳಿರುವ ರಸ್ತೆಯಲ್ಲಿ ವಾಹನ ಸಾಗುತ್ತಿದೆ.
- ವಾಹನವು ಹೊಸ ರಸ್ತೆ ಅಥವಾ ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ಸಾಗುತ್ತಿದೆ.
- ವಾಹನವನ್ನು ಫೆರಿ ಅಥವಾ ಹೆವಿ ಡ್ಯೂಟಿ ಸಾಗಾಟ ವಾಹನದಲ್ಲಿ ಸಾಗಿಸಲಾಗುತ್ತಿದೆ.
- ವಾಹನವು ಕಡಿದಾದ ಪರ್ವತ ಪ್ರದೇಶದಲ್ಲಿ ಅಥವಾ ಇಳಿಜಾರಿನ ತಿರುವು ರಸ್ತೆಯಲ್ಲಿ ಸಾಗುತ್ತಿದೆ.
- ಒಂದು ಅಂಡರ್‌ಗ್ರೌಂಡ್ ಪಾರ್ಕಿಂಗ್ ಲಾಟ್ ಅಥವಾ ಬಹುಮಹಡಿ ಪಾರ್ಕಿಂಗ್ ಲಾಟ್‌ನಲ್ಲಿ ಟರ್ನ್‌ಟೇಬಲ್ ಮೂಲಕ ತಿರುವು ತೆಗೆದುಕೊಂಡ ಬಳಿಕ ವಾಹನವು ಸಾರ್ವಜನಿಕ ರಸ್ತೆಗೆ ಪ್ರವೇಶಿಸುತ್ತಿದೆ.
- ವಾಹನವು ಪದೇಪದೆ ನಿಲ್ಲುತ್ತದೆ ಮತ್ತು ಸ್ಟಾರ್ಟ್ ಆಗುತ್ತದೆ ಅಥವಾ ಒಂದು ವಿಭಜಕ ರಸ್ತೆ ಮುಂದೆ ನಿಧಾನವಾಗಿ ಚಲಿಸುತ್ತದೆ.
- ವಾಹನದ ಬ್ಯಾಟರಿ ರೀಚಾರ್ಜ್ ಆದ ಬಳಿಕ ಅಥವಾ ಅದನ್ನು ಬದಲಾಯಿಸಿದ ಬಳಿಕ ಸಿಸ್ಟಂ ರೀಬೂಟ್ ಆಗುತ್ತದೆ.
- ನೀವು ಭಾರೀ ಮರಳು ಅಥವಾ ಹಿಮದಂಥ ಜಾರುವ ಪರಿಸ್ಥಿತಿಗಳಲ್ಲಿ ಚಾಲನೆ ಮಾಡುತ್ತಿದ್ದೀರಿ.
- ಟೈರ್‌ಗಳನ್ನು ಇತ್ತೀಚೆಗೆ ಬದಲಿಸಲಾಗಿದೆ ಅಥವಾ ಸ್ಟಡ್‌ಹರಿತ ಟೈರ್‌ಗಳನ್ನು ಅಥವಾ ಸ್ಪೇರ್ ಟೈರ್‌ಗಳನ್ನು ಬಳಸಲಾಗಿದೆ.
- ಅಸಮರ್ಪಕ ಗಾತ್ರದ ಟೈರ್‌ಗಳನ್ನು ಬಳಸಿದಾಗ ಅಥವಾ ಪ್ರತಿ ಟೈರ್‌ನ ಒತ್ತಡವು ಭಿನ್ನವಾಗಿದ್ದಾಗ.
- ಬದಲಿಸಿದ ಟೈರ್ ಸವೆದಿದೆ ಮತ್ತು ವಿಶೇಷವಾಗಿ, ಎರಡು ಋತುಗಳಿಗಿಂತ ಹೆಚ್ಚು ಅವಧಿಗೆ ಸ್ಟಡ್‌ರಹಿತ ಟೈರ್‌ಗಳನ್ನು ಬಳಸಲಾಗಿದೆ.
- ನಿಮ್ಮ ವಾಹನದ ಮೇಲೆ ರೂಫ್ ಕ್ಯಾರಿಯರ್ ಸ್ಥಾಪಿಸಲಾಗಿದೆ.
- ಹೆದ್ದಾರಿಯಲ್ಲಿ ನಿರಂತರ ಡ್ರೈವಿಂಗ್ ಮಾಡುವುದರಿಂದ ಸಿಸ್ಟಂ ಮ್ಯಾಪ್ ಹೋಲಿಸುವಿಕೆ ಥವಾ ಅಪ್‌ಡೇಟ್ ಮಾಡಿದ GPS ಡೇಟಾ ಅನ್ವಯಿಸುವಿಕೆ ಮಾಡುತ್ತದೆ.
- ಈ ಕೆಳಗಿನ ಪರಿಸ್ಥಿತಿಗಳಲ್ಲಿ ನ್ಯಾವಿಗೇಶನ್ ಸೇವೆಯನ್ನು ಸರಿಯಾಗಿ ಒದಗಿಸದಿರಬಹುದು:
- ವಾಹನವು ನೇರವಾದ ರಸ್ತೆಯಲ್ಲಿ ನಿರಂತರವಾಗಿ ಚಲಾಯಿಸಲ್ಪಟ್ಟಾಗ, ನೇರವಾಗಿ ಡ್ರೈವ್ ಮಾಡಲು ಸಿಸ್ಟಂ ನಿಮಗೆ ಮಾರ್ಗದರ್ಶನ ನೀಡಬಹುದು. ಇದು ದೋಷವಲ್ಲ.
- ವಿಭಜಕ ರಸ್ತೆಯಲ್ಲಿ ವಾಹನ ತಿರುವು ತೆಗೆದುಕೊಂಡ ಬಳಿಕ ಅಥವಾ ಒಂದು ವಿಭಜಕ ರಸ್ತೆಯಲ್ಲಿ ಡ್ರೈವ್ ಮಾಡಿದ ಬಳಿಕ ತಕ್ಷಣವೇ ಮಾರ್ಗದರ್ಶನವನ್ನು ಅನುಸರಿಸದೆ ಇರಬಹುದು.
- ನಿಷೇಧಿತ ಪ್ರದೇಶದಲ್ಲಿ U-ಟರ್ನ್ ತೆಗೆದುಕೊಳ್ಳುವಂತೆ ಸಿಸ್ಟಂ ನಿಮಗೆ ಮಾರ್ಗದರ್ಶನ ನೀಡಬಹುದು.
- ಸಂಚಾರ ದಟ್ಟಣೆಯ ರಸ್ತೆಗೆ (ಉದಾ. ಪ್ರವೇಶವಿಲ್ಲದ ರಸ್ತೆ ಅಥವಾ ನಿರ್ಮಾಣ ಹಂತದಲ್ಲಿರುವ ರಸ್ತೆ) ಸಿಸ್ಟಂ ನಿಮ್ಮನ್ನು ಮುನ್ನಡೆಸಬಹುದು.
- ತಲುಪುವ ಸ್ಥಳಕ್ಕೆ ಯಾವುದೇ ರಸ್ತೆಗಳು ಇಲ್ಲದಿದ್ದಾಗ ಅಥವಾ ಮಾರ್ಗದಲ್ಲಿ ಕೇವಲ ಕಿರಿದಾದ ರಸ್ತೆಗಳು ಇದ್ದಾಗ ತಲುಪುವ ಸ್ಥಳದಿಂದ ದೂರದಲ್ಲಿರುವ ರಸ್ತೆಗೆ ಸಿಸ್ಟಂ ನಿಮ್ಮನ್ನು ಮುನ್ನಡೆಸಬಹುದು.
- ವಾಹನವು ಮಾರ್ಗದಲ್ಲಿ ಇಲ್ಲದಿದ್ದಾಗ ಮಾರ್ಗದರ್ಶನವು ಸೂಕ್ತವಾಗಿ ಇಲ್ಲದಿರಬಹುದು.
- ಆರಂಭದ ಪಾಯಿಂಟ್ ವ್ಯತ್ಯಾಸದಿಂದಾಗಿ ಮಾರ್ಗದರ್ಶನವು ಓವರ್‌ಪಾಸ್ ಅಥವಾ ಅಂಡರ್‌ಪಾಸ್‌ನಲ್ಲಿ ನೈಜ ದೂರಕ್ಕೆ ಹೋಲಿಕೆಯಾಗದಿರಬಹುದು.
- ನೀವು ಅಧಿಕ ವೇಗಗಳಲ್ಲಿ ಡ್ರೈವ್ ಮಾಡುವಾಗ, ಮಾರ್ಗದ ಮರುಲೆಕ್ಕಾಚಾರಗಳು ದೀರ್ಘ ಸಮಯ ತೆಗೆದುಕೊಳ್ಳಬಹುದು.