ಸೇವೆಯನ್ನು ಬಳಸಲು ನೀವು Kia Connect ಅನ್ನು ಸಿಸ್ಟಂನಲ್ಲಿ ರನ್ ಮಾಡಬಹುದು.
ಎಲ್ಲಾ ಮೆನುಗಳ ಪರದೆಯಲ್ಲಿ, Kia Connect ಒತ್ತಿ.
ವಿಧ1
ವಿಧ2
ಎಚ್ಚರಿಕೆ
ಗೊಂದಲಕ್ಕೊಳಗಾಗಿರುವಾಗ ಚಾಲನೆ ಮಾಡುವುದರಿಂದ ವಾಹನದ ನಿಯಂತ್ರಣ ತಪ್ಪಬಹುದು, ಅದರಿಂದ ಒಂದು ಅಪಘಾತ, ಗಂಭೀರ ದೈಹಿಕ ಗಾಯ ಅಥವಾ ಸಾವಿಗೆ ಕಾರಣವಾಗಬಹುದು. ಸುರಕ್ಷಿತ ಮತ್ತು ಕಾನೂನುಬದ್ಧ ಕಾರ್ಯಾಚರಣೆ ಮಾಡುವುದು ಡ್ರೈವರ್ ಪ್ರಾಥಮಿಕ ಜವಾಬ್ದಾರಿಯಾಗಿದೆ ಮತ್ತು ಡ್ರೈವರ್ ಕಣ್ಣುಗಳು, ಗಮನ ಮತ್ತು ದೃಷ್ಟಿಯನ್ನು ಸುರಕ್ಷಿತ ಚಾಲನೆಯಿಂದ ಬೇರೆಡೆಗೆ ಸೆಳೆಯುವ ಅಥವಾ ಕಾನೂನಿನಡಿ ಅನುಮತಿ ಇಲ್ಲದಿರುವ ಟಚ್‌ಸ್ಕ್ರೀನ್ ಹಾಗೂ ಸ್ಟೀರಿಂಗ್ ವೀಲ್ ನಿಯಂತ್ರಣಗಳು ಸೇರಿದಂತೆ, ಯಾವುದೇ ವಾಹನ ಸಿಸ್ಟಂಗಳನ್ನು ಚಾಲನೆ ಮಾಡುವಾಗ ಎಂದಿಗೂ ಬಳಸಬಾರದು.
ನೀವು ಡೆಸ್ಟಿನೇಷನ್ ಅನ್ನು ಹೊಂದಿಸಬಹುದು ಮತ್ತು ಅದರ ಸ್ಥಳವನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಒಂದೋ ನಾವು ಕಳುಹಿಸಬೇಕಾದ ಫೋನ್ ಸಂಖ್ಯೆಯನ್ನು ನೀವಾಗಿ ನಮೂದಿಸಬಹುದು ಅಥವಾ ಬ್ಲೂಟೂತ್ ಅನ್ನು ಸಕ್ರಿಯಗೊಳಿಸುವ ಮೂಲಕ ಫೋನ್ ಪುಸ್ತಕದಲ್ಲಿನ ಸಂಪರ್ಕಗಳಿಂದ ನಾವು ಆಯ್ಕೆ ಮಾಡಬಹುದು.
ಸ್ವೀಕರಿಸುವವರ ಫೋನ್ ಸಂಖ್ಯೆಯನ್ನು ನೀವಾಗಿ ನಮೂದಿಸಿ.
ಇಂದು ಮತ್ತು ನಾಳೆಗಾಗಿ ಶೆಡ್ಯೂಲ್ ಮಾಡಿದ ವಿವರಗಳನ್ನು ನೋಡಿ.
ಎಲ್ಲ ಮೆನುಗಳ ಸ್ಕ್ರೀನ್‌ನಲ್ಲಿ, Kia Connect ▶ ಕ್ಯಾಲೆಂಡರ್ಒತ್ತಿ.
ಕ್ಯಾಲೆಂಡರ್ ಪರದೆಯಿಂದ ಈವೆಂಟ್ ಅನ್ನು ಒತ್ತುವ ಮೂಲಕ ನೀವು ವೇಳಾಪಟ್ಟಿ ವಿವರಗಳನ್ನು ವೀಕ್ಷಣೆ ಮಾಡಬಹುದು ಮತ್ತು ಅದರ ತಲುಪುವ ಸ್ಥಳ ಹುಡುಕಬಹುದು.
ಶೆಡ್ಯೂಲ್ ಅಧಿಸೂಚನೆ ನಿರ್ದಿಷ್ಟ ಸಮಯದಲ್ಲಿ ಪಾಪ್ ಅಪ್ ಆಗುತ್ತದೆ.
ನೀವು ಇಂದಿಗಾಗಿ ಹವಾಮಾನ ಮಾಹಿತಿಯನ್ನು (ಉದಾ. ತಾಪಮಾನ, ಆರ್ದ್ರತೆ, ಭಾಷ್ಪೀಕರಣ ಮತ್ತು ಮಳೆಯ ಸಂಭಾವ್ಯತೆ) ಅಥವಾ ಹವಾಮಾನ ಮುನ್ಸೂಚನೆಯನ್ನು ನೋಡಬಹುದು.
ಎಲ್ಲ ಮೆನುಗಳ ಸ್ಕ್ರೀನ್‌ನಲ್ಲಿ, Kia Connect ▶ ಹವಾಮಾನಒತ್ತಿ.
ನೀವು ಕ್ರಿಕೆಟ್ ಮತ್ತು ಫುಟ್‌ಬಾಲ್‌ಗೆ ಸಂಬಂಧಿಸಿದ ಫಲಿತಾಂಶಗಳು ಮತ್ತು ಸಂಬಂಧಿತ ಮಾಹಿತಿಯನ್ನು ನೋಡಬಹುದು.
ಎಲ್ಲ ಮೆನುಗಳ ಸ್ಕ್ರೀನ್‌ನಲ್ಲಿ, Kia Connect ▶ ಕ್ರೀಡೆಒತ್ತಿ.
ಫುಟ್‌ಬಾಲ್
ಕ್ರಿಕೆಟ್
ಪ್ರತಿ ಕ್ರೀಡಾ ಈವೆಂಟ್ ವಿಧಕ್ಕಾಗಿ ನೀವು ನಿಮ್ಮ ಮೆಚ್ಚಿನ ತಂಡಗಳನ್ನು ಸೆಟ್ ಮಾಡಬಹುದು. ಪಟ್ಟಿಯ ಮೇಲ್ಭಾಗದಲ್ಲಿರುವ ತಂಡಗಳಿಗೆ ನೀವು ಗೇಮ್ ಮಾಹಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು.
ಆ ತಂಡಗಳಿಗೆ ಆಟದ ಮಾಹಿತಿ ಪಟ್ಟಿಯ ಮೇಲ್ಭಾಗದಲ್ಲಿ ಕಾಣಿಸುತ್ತದೆ.
ನಿಮ್ಮ ವಾಹನದಲ್ಲಿ ಸಮಸ್ಯೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಿಮಗೆ ಕುತೂಹಲವಿದ್ದರೆ, ನಿಮ್ಮ ವಾಹನವನ್ನು ನೀವು ಡಯಾಗ್ನಾಸ್ ಮಾಡಬಹುದು. ಡಯಾಗ್ನೋಸಿಸ್ ಫಲಿತಾಂಶದೊಂದಿಗೆ, ನೀವು ಮೆಂಟೇನನ್ಸ್ ಸರ್ವೀಸ್ ಅನ್ನು ಕೂಡ ಕಾಯ್ದಿರಿಸಬಹುದು.
ನೀವು Kia Connect ಸರ್ವೀಸ್‌ಗೆ ಚಂದಾದಾರರಾಗಬಹುದು ಅಥವಾ ಮಾಡೆಮ್ ಮಾಹಿತಿಯನ್ನು ನೋಡಬಹುದು.
Kia Connect, ನೊಂದಿಗೆ ವಾಯ್ಸ್ ಕಮಾಂಡ್‌ಗಳನ್ನು ಬಳಸಿ ಆನ್‌ಲೈನ್ ಮ್ಯಾಪ್‌ನಿಂದ ನೀವು ಸ್ಥಳಗಳಿಗಾಗಿ ಹುಡುಕಬಹುದು.
ಒಂದು ವೇಳೆ ನೀವು ಮ್ಯಾಪ್ ಅಥವಾ ಸಿಸ್ಟಂ ಅನ್ನು ಅಪ್‌ಡೇಡ್ ಮಾಡದಿದ್ದರೆ ಅಥವಾ ನ್ಯಾವಿಗೇಶನ್‌ನಲ್ಲಿ ನಿಮ್ಮ ತಲುಪುವ ಸ್ಥಳ ಕಂಡುಬರದಿದ್ದರೆ, ಸ್ಥಳಗಳಿಗಾಗಿ ಹುಡುಕಲು ಮತ್ತು ಮಾರ್ಗದರ್ಶನ ಪಡೆಯಲು ಆನ್‌ಲೈನ್ ಸರ್ವರ್‌ಗಳಿಂದ ನೀವು ಇತ್ತೀಚಿನ ಮಾಹಿತಿಯನ್ನು ಬಳಸಬಹುದು.
ಧ್ವನಿ ಮಾರ್ಗದರ್ಶನದೊಂದಿಗೆ ಧ್ವನಿ ಗುರುತಿಸುವಿಕೆ ಆರಂಭವಾಗುತ್ತದೆ.