ಇನ್‌ಫೊಟೇನ್‌ಮೆಂಟ್‌/ಕ್ಲೈಮ್ಯಾಟ್ ಬದಲಾವಣೆ ಮಾಡಬಹುದಾದ ಕಂಟ್ರೋಲರ್ ಬಳಸುವುದು

ಘಟಕಗಳ ಹೆಸರುಗಳು ಮತ್ತು ಕಾರ್ಯಗಳು

ಕೆಳಗಿನವುಗಳು ನಿಮ್ಮ ಇನ್‌ಫೊಟೇನ್‌ಮೆಂಟ್‌/ಕ್ಲೈಮ್ಯಾಟ್‌ ಬದಲಿಸಬಹುದಾದ ಕಂಟ್ರೋಲರ್‌ ಘಟಕಗಳ ಹೆಸರುಗಳು ಮತ್ತು ಕಾರ್ಯಗಳನ್ನು ವಿವರಿಸುತ್ತದೆ.
ಸೂಚನೆ
ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಸಿಸ್ಟಮ್ ಘಟಕಗಳ ನೋಟ ಮತ್ತು ವಿನ್ಯಾಸವು ನಿಜವಾದ ಉತ್ಪನ್ನಕ್ಕಿಂತ ಭಿನ್ನವಾಗಿರಬಹುದು. ಮಾಲೀಕರ ಕೈಪಿಡಿ, ಕ್ಯಾಟಲಾಗ್‌, ವೆಬ್‌ ಮ್ಯಾನ್ಯುಅಲ್‌ ಮತ್ತು ತ್ವರಿತ ರೆಫರೆನ್ಸ್‌ ಮಾರ್ಗದರ್ಶಿಯನ್ನು ನೋಡಿ.

ಇನ್‌ಫೊಟೇನ್‌ಮೆಂಟ್ ಕಂಟ್ರೋಲ್ ಪ್ಯಾನೆಲ್‌ (ನ್ಯಾವಿಗೇಶನ್‌ ಬೆಂಬಲಿಸುತ್ತದೆ)

a
POWER ಬಟನ್ (PWR)/VOLUME ನಾಬ್ (VOL)
ಆಯ್ಕೆ A
  • ರೇಡಿಯೋ/ಮಾಧ್ಯಮವನ್ನು ಆನ್ ಅಥವಾ ಆಫ್ ಮಾಡಿ.
  • ಪರದೆ ಮತ್ತು ಧ್ವನಿಯನ್ನು ಆಫ್ ಮಾಡಲು ಬಟನ್ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
  • ಸಿಸ್ಟಂ ವಾಲ್ಯೂಮ್ ಅನ್ನು ಸರಿಹೊಂದಿಸಲು ನಾಬ್ ಅನ್ನು ತಿರುಗಿಸಿ (ನ್ಯಾವಿಗೇಷನ್ ಧ್ವನಿಯನ್ನು ಹೊರತುಪಡಿಸಿ).
ಆಯ್ಕೆ B
  • ಮೀಡಿಯಾವನ್ನು ಆನ್ ಅಥವಾ ಆಫ್ ಮಾಡಲು ಒತ್ತಿ.
  • ಸ್ಕ್ರಿನ್ ಮತ್ತು ಸೌಂಡ್ ಆಫ್ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
  • ಸಿಸ್ಟಂ ವಾಲ್ಯೂಮ್ ಅನ್ನು ಹೊಂದಿಸಿ (ನ್ಯಾವಿಗೇಶನ್ ಸೌಂಡ್‌‌ಗಾಗಿ ಹೊರತುಪಡಿಸಿ).
b
ಸಿಸ್ಟಮ್ ರೀಸೆಟ್ ಬಟನ್
  • ಸಿಸ್ಟಮ್ ಮರುಪ್ರಾರಂಭಿಸಿ.
c
ಇನ್‌ಫೊಟೇನ್‌ಮೆಂಟ್‌/ಕ್ಲೈಮ್ಯಾಟ್‌ ಸ್ವಿಚ್ ಬಟನ್ ()
  • ಕಂಟ್ರೋಲ್ ಪ್ಯಾನೆಲ್ ಫಂಕ್ಷನ್‌ಗಳ ಮಧ್ಯೆ ಬದಲಿಸಿ.
  • ಕಂಟ್ರೋಲ್ ಪ್ಯಾನಲ್ ಡೀಫಾಲ್ಟ್‌ ಸೆಟ್ಟಿಂಗ್‌ಗಳ ಸ್ಕ್ರೀನ್ ಆಕ್ಸೆಸ್ ಮಾಡಲು ಒತ್ತಿ ಹಿಡಿಯಿರಿ.
ಆಯ್ಕೆ A
ಆಯ್ಕೆ B

d
MAP ಬಟನ್
ಆಯ್ಕೆ A
  • ನಕ್ಷೆಯಲ್ಲಿ ಪ್ರಸ್ತುತ ಸ್ಥಳವನ್ನು ಪ್ರದರ್ಶಿಸುತ್ತದೆ.
  • ನ್ಯಾವಿಗೇಷನ್ ಪರದೆಯಲ್ಲಿ ಮಾರ್ಗದರ್ಶನ ತೋರಿಸುತ್ತಿರುವಾಗ, ಧ್ವನಿ ಮಾರ್ಗದರ್ಶನವನ್ನು ಪುನರಾವರ್ತಿಸಲು ಒತ್ತಿರಿ.
ಆಯ್ಕೆ B
  • ನಕ್ಷೆಯಲ್ಲಿ ಪ್ರಸ್ತುತ ಸ್ಥಳಕ್ಕೆ ವಾಪಸಾಗಿ.
  • ನಕ್ಷೆ ಸ್ಕ್ರೀನ್‌ನಲ್ಲಿ ಮಾರ್ಗದರ್ಶಿಯಲ್ಲಿರುವಾಗ, ವಾಯ್ಸ್ ಮಾರ್ಗದರ್ಶಿ ಪುನರಾವರ್ತಿಸಲು ಒತ್ತಿರಿ.
e
NAV ಬಟನ್ (ಅರ್ಹವಾಗಿದ್ದರೆ)
  • ನ್ಯಾವಿಗೇಷನ್ ಮೆನು ಸ್ಕ್ರೀನ್ ಅನ್ನು ಪ್ರದರ್ಶಿಸುತ್ತದೆ.
  • ಹುಡುಕಾಟ ಪರದೆಯನ್ನು ಪ್ರದರ್ಶಿಸಲು ಬಟನ್ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
f
ಕಸ್ಟಮ್ ಬಟನ್ ()
ಆಯ್ಕೆ A
  • ಬಳಕೆದಾರರು ವ್ಯಾಖ್ಯಾನಿಸಿದ ಸೌಲಭ್ಯವನ್ನು ರನ್ ಮಾಡುತ್ತದೆ.
  • ಸೌಲಭ್ಯ ಸೆಟ್ಟಿಂಗ್‌ಗಳ ಪರದೆಯನ್ನು ಪ್ರದರ್ಶಿಸಲು ಬಟನ್ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
ಆಯ್ಕೆ B
  • ಬಳಕೆದಾರರು ವ್ಯಾಖ್ಯಾನಿಸಿದ ಸೌಲಭ್ಯವನ್ನು ರನ್ ಮಾಡುತ್ತದೆ.
  • ಕಾರ್ಯಕ್ಷಮತೆ ಸೆಟ್ಟಿಂಗ್‌ಗಳ ಸ್ಕ್ರೀನ್ ಪ್ರದರ್ಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
g
SEEK/TRACK ಬಟನ್
ಆಯ್ಕೆ A
  • ರೇಡಿಯೊವನ್ನು ಕೇಳುವಾಗ, ಬ್ರಾಡ್‌ಕಾಸ್ಟಿಂಗ್ ಸ್ಟೇಷನ್ ಅನ್ನು ಬದಲಾಯಿಸಿ.
  • ಮಾಧ್ಯಮವನ್ನು ಪ್ಲೇ ಮಾಡುವಾಗ, ಟ್ರ್ಯಾಕ್/ಫೈಲ್ ಅನ್ನು ಬದಲಾಯಿಸಿ. ರಿವೈಂಡ್ ಮಾಡಲು ಅಥವಾ ಫಾಸ್ಟ್ ಫಾರ್ವರ್ಡ್ ಮಾಡಲು ಒತ್ತಿ ಹಿಡಿದುಕೊಳ್ಳಿ (Bluetooth ಆಡಿಯೊ ಮೋಡ್ ಹೊರೆತುಪಡಿಸಿ).
ಆಯ್ಕೆ B
  • ರೇಡಿಯೋವನ್ನು ಕೇಳುತ್ತಿರುವಾಗ, ಸ್ಟೇಷನ್ ಬದಲಾಯಿಸಿ.
  • ಮಾಧ್ಯಮವನ್ನು ಪ್ಲೇ ಮಾಡುವಾಗ, ಟ್ರ್ಯಾಕ್/ಫೈಲ್ ಅನ್ನು ಬದಲಾಯಿಸಿ.
h
RADIO ಬಟನ್ (ಅರ್ಹವಾಗಿದ್ದರೆ)
  • ರೇಡಿಯೋ ಆನ್ ಮಾಡುತ್ತದೆ.
  • ರೇಡಿಯೋ ಆನ್ ಆಗಿರುವಾಗ, FM ಮತ್ತು AM ಮೋಡ್‌ಗಳ ನಡುವೆ ಟಾಗಲ್ ಮಾಡಲು ಪದೇ ಪದೇ ಬಟನ್ ಒತ್ತಿರಿ.
  • ರೇಡಿಯೋ/ಮಾಧ್ಯಮ ಆಯ್ಕೆಯ ವಿಂಡೋವನ್ನು ಪ್ರದರ್ಶಿಸಲು ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
i
MEDIA ಬಟನ್
ಆಯ್ಕೆ A
  • ಸಂಪರ್ಕಿತ ಮಾಧ್ಯಮವನ್ನು ರನ್ ಮಾಡುತ್ತದೆ.
  • ರೇಡಿಯೋ/ಮಾಧ್ಯಮ ಆಯ್ಕೆಯ ವಿಂಡೋವನ್ನು ಪ್ರದರ್ಶಿಸಲು ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
ಆಯ್ಕೆ B
  • ಸಂಪರ್ಕಿತ ಮಾಧ್ಯಮವನ್ನು ರನ್ ಮಾಡುತ್ತದೆ.
  • ರೇಡಿಯೋ/ಮೀಡಿಯಾ ಆಯ್ಕೆ ವಿಂಡೋ ಪ್ರದರ್ಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
j
SETUP ಬಟನ್
ಆಯ್ಕೆ A
  • ಸೆಟ್ಟಿಂಗ್‌ಗಳ ಸ್ಕ್ರೀನ್‌ ಪ್ರದರ್ಶಿಸುತ್ತದೆ.
  • ಸಾಫ್ಟ್‌ವೇರ್ ಆವೃತ್ತಿಯ ಮಾಹಿತಿ ಪರದೆಯ ಡಿಸ್‌ಪ್ಲೇ ಗೆ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
ಆಯ್ಕೆ B
  • ಸೆಟ್ಟಿಂಗ್‌ಗಳ ಸ್ಕ್ರೀನ್‌ ಪ್ರದರ್ಶಿಸುತ್ತದೆ.
  • ಆವೃತ್ತಿಯ ಮಾಹಿತಿ ಸ್ಕ್ರೀನ್ ಅನ್ನು ಪ್ರದರ್ಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
k
TUNE ನಾಬ್
ಆಯ್ಕೆ A
  • ರೇಡಿಯೊವನ್ನು ಆಲಿಸುವಾಗ, ಫ್ರೀಕ್ವೆನ್ಸಿ ಹೊಂದಿಸಿ ಅಥವಾ ಪ್ರಸಾರ ಚಾನಲ್ ಅನ್ನು ಬದಲಾಯಿಸಿ.
  • ಮೀಡಿಯಾವನ್ನು ಪ್ಲೇ ಮಾಡುವಾಗ, ಸಂಗೀತ ಅಥವಾ ಫೈಲ್‌ಗಳನ್ನು ಹುಡುಕಿ (ಬ್ಲೂಟೂತ್ ಆಡಿಯೋ ಮೋಡ್ ಹೊರತುಪಡಿಸಿ).
  • ಹುಡುಕಿ ಸಮಯದಲ್ಲಿ, ಪ್ರಸ್ತುತ ಚಾನಲ್, ಸಂಗೀತ ಅಥವಾ ಫೈಲ್ ಅನ್ನು ಆಯ್ಕೆಮಾಡಿ.
  • ನಕ್ಷೆಯ ಸ್ಕ್ರೀನ್‌ ಮೇಲೆ, ನಕ್ಷೆಯಲ್ಲಿ ಜೂಮ್ ಇನ್ ಅಥವಾ ಔಟ್ ಮಾಡಿ (ಸಕ್ರಿಯಗೊಳಿಸಿದರೆ).
ಆಯ್ಕೆ B
  • ರೇಡಿಯೋವನ್ನು ಕೇಳುವಾಗ, ಫ್ರೀಕ್ವೆನ್ಸಿಯನ್ನು ಹೊಂದಿಸಿ ಅಥವಾ ಸ್ಟೇಷನ್‌ ಅನ್ನು ಬದಲಾಯಿಸಿ. (ಬಟನ್ ಸೆಟ್ಟಿಂಗ್‌ನಲ್ಲಿ ಬಳಸಲು ನೀವು ಫಂಕ್ಷನ್‌ ಅನ್ನು ಆಯ್ಕೆ ಮಾಡಬಹುದು.)
  • ಮಾಧ್ಯಮವನ್ನು ಪ್ಲೇ ಮಾಡುವಾಗ, ಸಂಗೀತ ಅಥವಾ ಫೈಲ್‌ಗಳನ್ನು ಸ್ಕ್ಯಾನ್ ಮಾಡಿ.
  • ಸ್ಕ್ಯಾನಿಂಗ್ ಸಮಯದಲ್ಲಿ, ಪ್ರಸ್ತುತ ಸ್ಟೇಷನ್‌, ಸಂಗೀತ ಅಥವಾ ಫೈಲ್ ಅನ್ನು ಆಯ್ಕೆಮಾಡಿ.
  • ನಕ್ಷೆಯ ಸ್ಕ್ರೀನ್‌ ಮೇಲೆ, ನಕ್ಷೆಯಲ್ಲಿ ಜೂಮ್ ಇನ್ ಅಥವಾ ಔಟ್ ಮಾಡಿ.
l
HOME ಬಟನ್ (ಅರ್ಹವಾಗಿದ್ದರೆ)
  • ಹೋಮ್ ಸ್ಕ್ರೀನ್‌ಗೆ ಹೋಗಿ.
  • ತ್ವರಿತ ನಿಯಂತ್ರಣ ಕಾರ್ಯವನ್ನು ಆನ್ ಅಥವಾ ಆಫ್ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
m
SEARCH ಬಟನ್ (ಅರ್ಹವಾಗಿದ್ದರೆ)
  • ಹುಡುಕಾಟ ಸ್ಕ್ರೀನ್ ಪ್ರದರ್ಶಿಸುತ್ತದೆ.

ಇನ್‌ಫೊಟೇನ್‌ಮೆಂಟ್ ಕಂಟ್ರೋಲ್ ಪ್ಯಾನಲ್ (ನ್ಯಾವಿಗೇಶನ್‌ ಬೆಂಬಲ ರಹಿತ, ವೈಡ್‌ ಸ್ಕ್ರೀನ್‌ ಮಾತ್ರ)

a
POWER ಬಟನ್ (PWR)/VOLUME ನಾಬ್ (VOL)
  • ರೇಡಿಯೊ/ಮಾಧ್ಯಮ ಕಾರ್ಯವನ್ನು ಆನ್ ಅಥವಾ ಆಫ್ ಮಾಡಿ.
  • ಸ್ಕ್ರಿನ್ ಮತ್ತು ಸೌಂಡ್ ಆಫ್ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
  • ಸಿಸ್ಟಮ್ ಸೌಂಡ್ ವಾಲ್ಯೂಮ್ ಅನ್ನು ಸರಿಹೊಂದಿಸಲು ತಿರುಗಿಸಿ.
b
ಸಿಸ್ಟಮ್ ರೀಸೆಟ್ ಬಟನ್
  • ಸಿಸ್ಟಮ್ ಮರುಪ್ರಾರಂಭಿಸಿ.
c
ಇನ್‌ಫೊಟೇನ್‌ಮೆಂಟ್‌/ಕ್ಲೈಮ್ಯಾಟ್‌ ಸ್ವಿಚ್ ಬಟನ್ ()
  • ಕಂಟ್ರೋಲ್ ಪ್ಯಾನೆಲ್ ಫಂಕ್ಷನ್‌ಗಳ ಮಧ್ಯೆ ಬದಲಿಸಿ.
  • ಕಂಟ್ರೋಲ್ ಪ್ಯಾನಲ್ ಡೀಫಾಲ್ಟ್‌ ಸೆಟ್ಟಿಂಗ್‌ಗಳ ಸ್ಕ್ರೀನ್ ಆಕ್ಸೆಸ್ ಮಾಡಲು ಒತ್ತಿ ಹಿಡಿಯಿರಿ.

d
HOME ಬಟನ್
  • ಹೋಮ್‌ ಸ್ಕ್ರೀನ್‌ ಪ್ರವೇಶಿಸಲು ಒತ್ತಿ.
e
PHONE ಬಟನ್
  • Bluetooth ಮುಖಾಂತರ ಮೊಬೈಲ್ ಫೋನ್ ಅನ್ನು ಸಂಪರ್ಕಿಸಲು ಒತ್ತಿ.
  • Bluetooth ಫೋನ್ ಸಂಪರ್ಕವನ್ನು ಮಾಡಿದ ನಂತರ, ನಿಮ್ಮ ಕರೆ ಇತಿಹಾಸವನ್ನು ಪ್ರವೇಶಿಸಲು ಒತ್ತಿ.
f
ಕಸ್ಟಮ್ ಬಟನ್ ()
  • ಕಸ್ಟಮ್ ಮಾಡಿ ಕಾರ್ಯವನ್ನು ಬಳಸಿ.
  • ಕಾರ್ಯ ಸೆಟ್ಟಿಂಗ್ ಸ್ಕ್ರಿನ್ ಪ್ರವೇಶ ಮಾಡಲು ಒತ್ತಿ ಮತ್ತು ಹಿಡಿದುಕೊಳ್ಳಿ.
g
SEEK/TRACK ಬಟನ್
  • ರೇಡಿಯೊವನ್ನು ಕೇಳುವಾಗ, ಸ್ಟೇಷನ್ ಬದಲಾಯಿಸಿ.
  • ಮಾಧ್ಯಮ ಪ್ಲೇ ಮಾಡುವಾಗ, ಟ್ರ್ಯಾಕ್/ಫೈಲ್ ಅನ್ನು ಬದಲಾಯಿಸಿ. ರಿವೈಂಡ್ ಮಾಡಲು ಅಥವಾ ಫಾಸ್ಟ್ ಫಾರ್ವರ್ಡ್ ಮಾಡಲು ಒತ್ತಿ ಹಿಡಿದುಕೊಳ್ಳಿ (Bluetooth ಆಡಿಯೊ ಮೋಡ್ ಹೊರೆತುಪಡಿಸಿ).
h
RADIO ಬಟನ್
  • ರೇಡಿಯೋ ಆನ್ ಮಾಡಿ. ರೇಡಿಯೋ ಕೇಳುತ್ತಿರುವಾಗ, ರೇಡಿಯೋ ಮೋಡ್ ಅನ್ನು ಬದಲಾಯಿಸಲು ಒತ್ತಿ.
  • ರೇಡಿಯೋ/ಮೀಡಿಯಾ ಆಯ್ಕೆ ವಿಂಡೋವನ್ನು ಪ್ರದರ್ಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
i
MEDIA ಬಟನ್
  • ಮಾಧ್ಯಮ ಸಂಗ್ರಹಣೆ ಡಿವೈಸ್ ನಿಂದ ಕಂಟೆಂಟ್ ಅನ್ನು ಪ್ಲೇ ಮಾಡಿ.
  • ರೇಡಿಯೋ/ಮೀಡಿಯಾ ಆಯ್ಕೆ ವಿಂಡೋವನ್ನು ಪ್ರದರ್ಶಿಸಲು ಒತ್ತಿ ಮತ್ತು ಹಿಡಿದುಕೊಳ್ಳಿ.
j
SETUP ಬಟನ್
  • ಸೆಟ್ಟಿಂಗ್‌ಗಳ ಸ್ಕ್ರಿನ್ ಅನ್ನು ಪ್ರವೇಶಿಸಿ.
  • ಆವೃತ್ತಿ ಮಾಹಿತಿ ಪರದೆಯನ್ನು ಪ್ರವೇಶಿಸಲು ಒತ್ತಿ ಹಿಡಿಯಿರಿ.
k
TUNE ನಾಬ್
  • ರೇಡಿಯೊ ಕೇಳುತ್ತಿರುವಾಗ, ಆವರ್ತನವನ್ನು ಸರಿಹೊಂದಿಸಿ ಅಥವಾ ನಿಲ್ದಾಣವನ್ನು ಬದಲಾಯಿಸಿ.
  • ಮಾಧ್ಯಮವನ್ನು ಪ್ಲೇ ಮಾಡುವಾಗ, ಟ್ರ್ಯಾಕ್/ಫೈಲ್ ಗಾಗಿ ಹುಡುಕಿ (Bluetooth ಆಡಿಯೊ ಮೋಡ್ ಹೊರೆತುಪಡಿಸಿ).
  • ಹುಡುಕಾಟದ ವೇಳೆ, ಪ್ರಸ್ತುತ ಟ್ರ್ಯಾಕ್/ಫೈಲ್ ಆಯ್ಕೆ ಮಾಡಲು ಒತ್ತಿರಿ.

ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್

a
POWER ಬಟನ್ (PWR)/ಸೀಟ್ ತಾಪಮಾನ ನಿಯಂತ್ರಣ ನಾಬ್ ()
  • ಕ್ಲೈಮ್ಯಾಟ್‌ ಕಂಟ್ರೋಲ್ ಕಾರ್ಯವನ್ನು ಆನ್ ಅಥವಾ ಆಫ್ ಮಾಡಿ.
  • ಪ್ರಯಾಣಿಕರ ಸೀಟ್ ತಾಪಮಾನವನ್ನು ಸರಿಹೊಂದಿಸಲು ತಿರುಗಿಸಿ.
b
ಮುಂದಿನ ವಿಂಡ್‌ಶೀಲ್ಡ್‌ ಡೀಫ್ರಾಸ್ಟ್‌ ಬಟನ್ ()
  • ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಮೂಲಕ ಫ್ರಂಟ್‌ ವಿಂಡ್‌ಶೀಲ್ಡ್‌ನಿಂದ ಫ್ರೋಸ್ಟ್‌ ತೆಗೆಯಿರಿ.
  • ಏರ್‌ ಇನ್‌ಟೇಕ್‌ ಕಂಟ್ರೋಲ್‌ ಸ್ವಯಂಚಾಲಿತವಾಗಿ ಬದಲಿಸಿ.
c
ಮುಂದಿನ ವಿಂಡೋ ಡೀಫ್ರಾಸ್ಟ್‌ ಬಟನ್‌ ()
  • ಡಿಫ್ರೋಸ್ಟರ್ ಗ್ರಿಡ್‌ ಮೂಲಕ ಹಿಂದಿನ ವಿಂಡೋದಿಂದ ಫ್ರೋಸ್ಟ್‌ ತೆಗೆಯಿರಿ.
d
AUTO ಮೋಡ್‌ ಬಟನ್ (AUTO CLIMATE)
  • ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಸ್ವಯಂಚಾಲಿತವಾಗಿ ನಿಗದಿತ ತಾಪಮಾನವನ್ನು ಹೊಂದಿಸುತ್ತದೆ.
  • AUTO ಫ್ಯಾನ್‌ ಮೋಡ್‌ ಫ್ಯಾನ್‌ ಸ್ಪೀಡ್‌ ಬದಲಿಸಲು ಪುನರಾವರ್ತಿತವಾಗಿ ಒತ್ತಿ.
e
ರೀಸರ್ಕ್ಯುಲೇಶನ್‌ ಬಟನ್ ()
  • ಹೊರ ಗಾಳಿಯನ್ನು ಆಫ್ ಮಾಡಿ ಮತ್ತು ಕಾರಿನ ಒಳಗಿನ ಗಾಳಿಯನ್ನು ರೀಸರ್ಕ್ಯುಲೇಟ್ ಮಾಡಿ.
f
ನ್‌ಫೊಟೇನ್‌ಮೆಂಟ್‌/ಕ್ಲೈಮ್ಯಾಟ್‌ ಸ್ವಿಚ್ ಬಟನ್ ()
  • ಕಂಟ್ರೋಲ್ ಪ್ಯಾನೆಲ್ ಫಂಕ್ಷನ್‌ಗಳ ಮಧ್ಯೆ ಬದಲಿಸಿ.
  • ಕಂಟ್ರೋಲ್ ಪ್ಯಾನಲ್ ಡೀಫಾಲ್ಟ್‌ ಸೆಟ್ಟಿಂಗ್‌ಗಳ ಸ್ಕ್ರೀನ್ ಆಕ್ಸೆಸ್ ಮಾಡಲು ಒತ್ತಿ ಹಿಡಿಯಿರಿ.
ಬಲ-ಕೈ ಚಾಲನೆಗಾಗಿ

g
ಪ್ರಯಾಣಿಕರ ಸೀಟ್‌ ತಾಪಮಾನ
  • ಪ್ರಯಾಣಿಕರ ಸೀಟ್‌ ತಾಪಮಾನವನ್ನು ಪ್ರದರ್ಶಿಸುತ್ತದೆ.
h
SYNC ಮೋಡ್ ಬಟನ್
  • ಚಾಲಕರ ಸೀಟ್, ಪ್ರಯಾಣಿಕರ ಸೀಟ್‌ ಮತ್ತು ಹಿಂಬದಿ ಸೀಟ್‌ಗಳಿಗೆ ನಿಗದಿಸಿದ ತಾಪಮಾನವನ್ನು ಬಳಸಲಾಗುತ್ತದೆ (ಅರ್ಹವಾಗಿದ್ದರೆ).
i
ಫ್ಯಾನ್ ವೇಗದ ಬಟನ್ ()/AUTO ಮೋಡ್ ಫ್ಯಾನ್ ವೇಗ
  • ಫ್ಯಾನ್ ವೇಗ ಹೊಂದಿಸಿ.
  • AUTO ಮೋಡ್‌ನಲ್ಲಿ ಫ್ಯಾನ್ ವೇಗವನ್ನು ಪ್ರದರ್ಶಿಸುತ್ತದೆ.
j
ಏರ್ ಕಂಡಿಷನರ್ ಬಟನ್ ()
  • ಗಾಳಿ ದಿಕ್ಕನ್ನು ಹೊಂದಿಸಿ.
k
ಏರ್ ಕಂಡಿಷನರ್ ಬಟನ್ (A/C)
  • ಏರ್ ಕಂಡೀಷನಿಂಗ್‌ ಕಾರ್ಯವನ್ನು ಆನ್ ಅಥವಾ ಆಫ್ ಮಾಡಿ.
l
ಚಾಲಕರ ಸೀಟ್‌ ತಾಪಮಾನ
  • ಚಾಲಕರ ಸೀಟ್‌ ತಾಪಮಾನವನ್ನು ಪ್ರದರ್ಶಿಸುತ್ತದೆ.
m
ಸೀಟ್ ತಾಪಮಾನ ನಿಯಂತ್ರಣ ನಾಬ್‌ ()
  • ಡ್ರೈವರ್‌ ಸೀಟ್ ತಾಪಮಾನವನ್ನು ಸರಿಹೊಂದಿಸಲು ತಿರುಗಿಸಿ.
n
ಹಿಂಬದಿ ಸೀಟ್ ಹವಾಮಾನ ನಿಯಂತ್ರಣ ಬಟನ್ (ಒಂದು ವೇಳೆ ಹೊಂದಿದ್ದರೆ)

ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ (ಎಲೆಕ್ಟ್ರಿಕ್ ವಾಹನಗಳು ಮಾತ್ರ)

a
POWER ಬಟನ್ (PWR)/ಸೀಟ್ ತಾಪಮಾನ ನಿಯಂತ್ರಣ ನಾಬ್ ()
  • ಕ್ಲೈಮ್ಯಾಟ್‌ ಕಂಟ್ರೋಲ್ ಕಾರ್ಯವನ್ನು ಆನ್ ಅಥವಾ ಆಫ್ ಮಾಡಿ.
  • ಡ್ರೈವರ್‌ ಸೀಟ್ ತಾಪಮಾನವನ್ನು ಸರಿಹೊಂದಿಸಲು ತಿರುಗಿಸಿ.
b
ಮುಂದಿನ ವಿಂಡ್‌ಶೀಲ್ಡ್‌ ಡೀಫ್ರಾಸ್ಟ್‌ ಬಟನ್‌ ()
  • ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಮೂಲಕ ಫ್ರಂಟ್‌ ವಿಂಡ್‌ಶೀಲ್ಡ್‌ನಿಂದ ಫ್ರೋಸ್ಟ್‌ ತೆಗೆಯಿರಿ.
  • ಏರ್‌ ಇನ್‌ಟೇಕ್‌ ಕಂಟ್ರೋಲ್‌ ಸ್ವಯಂಚಾಲಿತವಾಗಿ ಬದಲಿಸಿ.
c
ಮುಂದಿನ ವಿಂಡೋ ಡೀಫ್ರಾಸ್ಟ್‌ ಬಟನ್‌ ()
  • ಡಿಫ್ರೋಸ್ಟರ್ ಗ್ರಿಡ್‌ ಮೂಲಕ ಹಿಂದಿನ ವಿಂಡೋದಿಂದ ಫ್ರೋಸ್ಟ್‌ ತೆಗೆಯಿರಿ.
d
AUTO ಮೋಡ್‌ ಬಟನ್‌ (AUTO CLIMATE)
  • ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಸ್ವಯಂಚಾಲಿತವಾಗಿ ನಿಗದಿತ ತಾಪಮಾನವನ್ನು ಹೊಂದಿಸುತ್ತದೆ.
  • AUTO ಫ್ಯಾನ್‌ ಮೋಡ್‌ ಫ್ಯಾನ್‌ ಸ್ಪೀಡ್‌ ಬದಲಿಸಲು ಪುನರಾವರ್ತಿತವಾಗಿ ಒತ್ತಿ.
e
ರೀಸರ್ಕ್ಯುಲೇಶನ್‌ ಬಟನ್ ()
  • ಹೊರ ಗಾಳಿಯನ್ನು ಆಫ್ ಮಾಡಿ ಮತ್ತು ಕಾರಿನ ಒಳಗಿನ ಗಾಳಿಯನ್ನು ರೀಸರ್ಕ್ಯುಲೇಟ್ ಮಾಡಿ.
f
ಇನ್‌ಫೊಟೇನ್‌ಮೆಂಟ್‌/ಕ್ಲೈಮ್ಯಾಟ್‌ ಸ್ವಿಚ್ ಬಟನ್ ()
  • ಕಂಟ್ರೋಲ್ ಪ್ಯಾನೆಲ್ ಫಂಕ್ಷನ್‌ಗಳ ಮಧ್ಯೆ ಬದಲಿಸಿ.
  • ಕಂಟ್ರೋಲ್ ಪ್ಯಾನಲ್ ಡೀಫಾಲ್ಟ್‌ ಸೆಟ್ಟಿಂಗ್‌ಗಳ ಸ್ಕ್ರೀನ್ ಆಕ್ಸೆಸ್ ಮಾಡಲು ಒತ್ತಿ ಹಿಡಿಯಿರಿ.
ಎಡ-ಕೈ ಚಾಲನೆಗಾಗಿ

g
ಚಾಲಕರ ಸೀಟ್‌ ತಾಪಮಾನ
  • ಚಾಲಕರ ಸೀಟ್‌ ತಾಪಮಾನವನ್ನು ಪ್ರದರ್ಶಿಸುತ್ತದೆ.
h
ಡ್ರೈವರ್ ಓನ್ಲೀ ಮೋಡ್ ಬಟನ್ (ಎಲೆಕ್ಟ್ರಿಕ್‌ ವಾಹನಗಳು ಮಾತ್ರ)
  • ಕ್ಲೈಮ್ಯಾಟ್ ಕಂಟ್ರೋಲ್ ಅನ್ನು ಚಾಲಕರ ಸೀಟ್‌ಗೆ ಮಾತ್ರ ಬಳಸಲಾಗುತ್ತದೆ.
i
ಏರ್ ಕಂಡಿಷನರ್ ಬಟನ್ (A/C)
  • ಏರ್ ಕಂಡೀಷನಿಂಗ್‌ ಕಾರ್ಯವನ್ನು ಆನ್ ಅಥವಾ ಆಫ್ ಮಾಡಿ.
j
ಫ್ಯಾನ್ ವೇಗದ ಬಟನ್‌ ()/AUTO ಮೋಡ್ ಫ್ಯಾನ್ ವೇಗ
  • ಫ್ಯಾನ್ ವೇಗ ಹೊಂದಿಸಿ.
  • AUTO ಮೋಡ್‌ನಲ್ಲಿ ಫ್ಯಾನ್ ವೇಗವನ್ನು ಪ್ರದರ್ಶಿಸುತ್ತದೆ.
k
ಏರ್ ಕಂಡಿಷನರ್ ಬಟನ್ ()
  • ಗಾಳಿ ದಿಕ್ಕನ್ನು ಹೊಂದಿಸಿ.
l
ಹೀಟರ್ ಮಾತ್ರದ ಮೋಡ್ ಬಟನ್ ()
  • ಹೀಟರ್ ಓನ್ಲೀ ಮೋಡ್ ಆನ್‌ ಅಥವಾ ಆಫ್‌ ಮಾಡಿ.
m
SYNC ಮೋಡ್ ಬಟನ್
  • ಚಾಲಕರ ಸೀಟ್, ಪ್ರಯಾಣಿಕರ ಸೀಟ್‌ ಮತ್ತು ಹಿಂಬದಿ ಸೀಟ್‌ಗಳಿಗೆ ನಿಗದಿಸಿದ ತಾಪಮಾನವನ್ನು ಬಳಸಲಾಗುತ್ತದೆ (ಅರ್ಹವಾಗಿದ್ದರೆ).
n
ಪ್ರಯಾಣಿಕರ ಸೀಟ್‌ ತಾಪಮಾನ
  • ಪ್ರಯಾಣಿಕರ ಸೀಟ್‌ ತಾಪಮಾನವನ್ನು ಪ್ರದರ್ಶಿಸುತ್ತದೆ.
o
ಸೀಟ್ ತಾಪಮಾನ ನಿಯಂತ್ರಣ ನಾಬ್‌ ()
  • ಪ್ರಯಾಣಿಕರ ಸೀಟ್ ತಾಪಮಾನವನ್ನು ಸರಿಹೊಂದಿಸಲು ತಿರುಗಿಸಿ.

ಕ್ಲೈಮ್ಯಾಟ್ ಕಂಟ್ರೋಲ್ ಪ್ಯಾನೆಲ್ (ಹಿಂದಿನ ಸೀಟ್‌ ಕ್ಲೈಮ್ಯಾಟ್ ಕಂಟ್ರೋಲ್ ಸಿಸ್ಟಮ್, ಅರ್ಹವಾಗಿದ್ದರೆ)

a
ಮುಂದಿನ ಸೀಟ್ ಹವಾಮಾನ ನಿಯಂತ್ರಣ ಬಟನ್ (FRONT)
  • ಮುಂದಿನ ಸೀಟ್‌ ಹವಾಮಾನ ನಿಯಂತ್ರಣ ಸಿಸ್ಟಂ ಸ್ಕ್ರೀನ್‌‌ಗೆ ಹೋಗಿ.
b
ಹಿಂದಿನ ಸೀಟ್ ತಾಪಮಾನ
  • ಹಿಂಬದಿ ಸೀಟ್ ತಾಪಮಾನವನ್ನು ಪ್ರದರ್ಶಿಸುತ್ತದೆ.
c
ಫ್ಯಾನ್ ವೇಗದ ಬಟನ್ ()
  • ಫ್ಯಾನ್ ವೇಗ ಹೊಂದಿಸಿ.
d
ಏರ್ ಕಂಡಿಷನರ್ ಬಟನ್ ()
  • ಗಾಳಿ ದಿಕ್ಕನ್ನು ಹೊಂದಿಸಿ.
e
ಹಿಂಭಾಗದ ಸೀಟ್ ಹವಾಮಾನ ನಿಯಂತ್ರಣ ಬಟನ್ ಲಾಕ್ ಮಾಡಿ (ಹಿಂಭಾಗ ಲಾಕ್ ಮಾಡಲಾಗಿದೆ)
  • ಹಿಂಬದಿ ಸೀಟ್‌ಗಾಗಿ ಹವಾಮಾನ ನಿಯಂತ್ರಣ ಕಾರ್ಯವನ್ನು ಲಾಕ್ ಮಾಡಿ.