ಡ್ರೈವಿಂಗ್ ಮತ್ತು ಶಕ್ತಿ ಮಾಹಿತಿ ವೀಕ್ಷಣೆ ಮತ್ತು ವಾಹನ ಚಾರ್ಜ್ ಶೆಡ್ಯೂಲಿಂಗ್‌ನಂತಹ ವಿವಿಧ EV ಗೆ ನಿರ್ದಿಷ್ಟವಾದ ಫಂಕ್ಷನ್‌ಗಳನ್ನು ನೀವು ಬಳಸಬಹುದು.
ಎಲ್ಲಾ ಮೆನುಗಳ ಪರದೆಯಲ್ಲಿ, EV ಒತ್ತಿ.
ಎಲೆಕ್ಟ್ರಿಕ್ ವಾಹನ ಸ್ಕ್ರೀನ್ ಈ ಮುಂದಿನ ವೈಶಿಷ್ಟ್ಯಗಳನ್ನು ಮತ್ತು ಮಾಹಿತಿಯನ್ನು ನೀಡುತ್ತದೆ:
ಈ ವೈಶಿಷ್ಟ್ಯವು ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಟರಿ ತಾಪಮಾನವನ್ನು ನಿಯಂತ್ರಿಸುತ್ತದೆ. ಈ ವೈಶಿಷ್ಟ್ಯವನ್ನು ಬಳಸುವುದರಿಂದ ವಾಹನದ ಡ್ರೈವಿಂ ರೇಂಜ್ ಕಡಿಮೆಮಾಡಬಹುದು.
ಸ್ಪ್ಲಿಟ್ ಸ್ಕ್ರೀನ್ ಮೋಡ್ ಅನ್ನು ಆನ್ ಮಾಡಿ ಮತ್ತು ಒತ್ತಿರಿ ಗರಿಷ್ಠ ಪವರ್ ಔಟ್‌ಪುಟ್ ಮೋಡ್.
ಡ್ರೈವ್ ಮಾಡಬಹುದಾದ ರೇಂಜ್‌ನ ಹೊರಗೆ ನೀವು ಡ್ರೈವ್ ಮಾಡಲು ಬಯಸಿದರೆ, ರೇಂಜ್‌ನ ಒಳಗೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ನೀವು ಹುಡುಕಬಹುದು ಮತ್ತು ಆಯ್ದ ಚಾರ್ಜಿಂಗ್ ಸ್ಟೇಷನ್‌ಗೆ ಮಾರ್ಗದ ಕುರಿತ ಮಾರ್ಗದರ್ಶನವನ್ನು ಆರಂಭಿಸಬಹುದು.
ಉಳಿದ ಬ್ಯಾಟರಿ ಪ್ರಮಾಣದ ಅಡಿಯಲ್ಲಿ ಡ್ರೈವ್ ಮಾಡಬಹುದಾದ ರೇಂಜ್ ಅನ್ನು ನೀವು ಪರಿಶೀಲಿಸಬಹುದು.
ಡ್ರೈವ್ ಮಾಡಬಹುದಾದ ರೇಂಜ್, ಚಾರ್ಜಿಂಗ್ ಪೂರ್ಣಗೊಳ್ಳಲು ಅಗತ್ಯ ನಿರೀಕ್ಷಿತ ಸಮಯ, ಫ್ಯೂಯೆಲ್ ದಕ್ಷತೆ ಗ್ರಾಫ್ ಮತ್ತು ಪವರ್ ಬಳಕೆಯನ್ನು ನೀವು ವೀಕ್ಷಿಸಬಹುದು.
ಡ್ರೈವ್ ಮಾಡಬಹುದಾದ ಅಂತರ ಮತ್ತು ನಿರೀಕ್ಷಿತ ಚಾರ್ಜಿಂಗ್ ಸಮಯವನ್ನು ನೀವು ನೋಡಬಹುದು.
ಎನರ್ಜಿ ಮಾಹಿತಿ ಸ್ಕ್ರೀನ್‌ನಲ್ಲಿ, ಬ್ಯಾಟರಿ ಸ್ಥಿತಿ ಒತ್ತಿ.
ಮುಂದಿನ ಡಿಪಾರ್ಚರ್ ಸಮಯವನ್ನು ಹೊಂದಿಸಿ.
ನಿಗದಿಸಿದ ನಿರ್ಗಮನ ಸಮಯಕ್ಕೆ ಅನುಗುಣವಾಗಿ ಅಟೊಮ್ಯಾಟಿಕ್ ಬ್ಯಾಟರಿ ಚಾರ್ಜಿಂಗ್ ಅಥವಾ ಹವಾಮಾನ ನಿಯಂತ್ರಣದಂತಹ ವಿವಿಧ ಕಾರ್ಯಗಳನ್ನು ನೀವು ಕಾನ್ಫಿಗರ್ ಮಾಡಬಹುದು.
ನಿರ್ಗಮನ ಸಮಯವನ್ನು ಆಧರಿಸಿ ಚಾರ್ಜಿಂಗ್ ಅನ್ನು ನೀವು ಶೆಡ್ಯೂಲ್ ಮಾಡಬಹುದು.
ಮುಂದಿನ ಡಿಪಾರ್ಚರ್ ಸಮಯಕ್ಕೆ ಅನುಗುಣವಾಗಿ ಹವಾಮಾನ ನಿಯಂತ್ರಣ ಮಾಡಲು ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಿ.
ವಿದ್ಯುತ್ ಬಳಕೆ ಮಿತಿಯನ್ನು ಹೊಂದಿಸಿ.
ಕನಿಷ್ಠ ಬ್ಯಾಟರಿ ಮಟ್ಟಕ್ಕೆ ಸಮನಾದ ಪವರ್‌ನ ವಿನಾಯಿತಿಯೊಂದಿಗೆ, ಬ್ಯಾಟರಿ ಪವರ್ ಅನ್ನು ಬಳಸಲಾಗಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಲಭ್ಯವಿರುವ ಅನುಕೂಲತೆಯ ವೈಶಿಷ್ಟ್ಯಗಳನ್ನು ನೀವು ಹೊಂದಿಸಿ ಮಾಡಬಹುದು.
ಚಾರ್ಜ್ ಮಾಡುವ ಬ್ಯಾಟರಿ ಮೊತ್ತವನ್ನು ನೀವು ಹೊಂದಿಸಬಹುದು.
ಇನ್‌ಸ್ಟಾಲ್ ಮಾಡಿದ ಚಾರ್ಜರ್ ವಿಧವನ್ನು ಆಧರಿಸಿ ನೀವು ಚಾರ್ಜಿಂಗ್ ಕರೆಂಟ್ ಅನ್ನು ಹೊಂದಿಸಬಹುದು.
ಚಳಿಗಾಲದಲ್ಲಿ ಚಾರ್ಜ್ ಶೆಡ್ಯೂಲ್ ಮಾಡುವಾಗ ಅಥವಾ ಹವಾಮಾನ ನಿಯಂತ್ರಣ ಮಾಡುವಾಗ ಚಾರ್ಜಿಂಗ್ ಮತ್ತು ಡ್ರೈವಿಂಗ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮೊದಲೇ ಬ್ಯಾಟರಿ ತಾಪಮಾನವನ್ನು ಹೆಚ್ಚಿಸಬಹುದು. ಇದರಿಂದ ಡ್ರೈವ್ ಮಾಡಬಹುದಾದ ಅಂತರವನ್ನು ಕಡಿಮೆ ಮಾಡುತ್ತದೆ. ಯಾಕೆಂದರೆ, ಇದರಿಂದ ಬೇಗ ಬ್ಯಾಟರಿ ಖಾಲಿಯಾಗುತ್ತದೆ.
ಯುಟಿಲಿಟಿ ಮೋಡ್ ಆನ್ ಮಾಡುತ್ತದೆ. ಈ ಕಾರ್ಯವೈಶಿಷ್ಟ್ಯ ಆನ್ ಆದಾಗ, ಡ್ರೈವಿಂಗ್ (ಅಧಿಕ ವೋಲ್ಟೇಜ್) ಬ್ಯಾಟರಿ ಬಳಸಿ ವಾಹನದಲ್ಲಿನ ಎಲೆಕ್ಟ್ರಿಕ್ ಸಿಸ್ಟಂಗಳನ್ನು ಆಪರೇಟ್ ಮಾಡಲಾಗುತ್ತದೆ.
ಪ್ರಸ್ತುತ ಡ್ರೈವಿಂಗ್ ಸನ್ನಿವೇಶಕ್ಕೆ ಅನುಗುಣವಾಗಿ ರಿಜನರೇಶನ್ ಮಟ್ಟವನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ.
ಸಂಪರ್ಕಿತ ಚಾರ್ಜಿಂಗ್ ಕೇಬಲ್‌ಗೆ ಲಾಕ್ ಮೋಡ್ ಸೆಟ್ಟಿಂಗ್ ಕಾನ್ಫಿಗರ್ ಮಾಡಿ.