ಫೋನ್ ಪ್ರೊಜೆಕ್ಷನ್

ವೈರ್‌ಲೆಸ್ ಆಗಿ Apple CarPlay ಬಳಸುವುದು

ನೀವು iPhone ಅನ್ನು ವಾಹನಕ್ಕೆ Apple CarPlay ನೊಂದಿಗೆ ಸಂಪರ್ಕಿಸಿದಾಗ, ಸಿಸ್ಟಂ ಸ್ಕ್ರೀನ್ ಮೂಲಕ ನೀವು ಆ್ಯಪ್‌ಗಳನ್ನು ರನ್ ಮಾಡಬಹುದು ಮತ್ತು ನಿಯಂತ್ರಿಸಬಹುದು. ಸಂಪರ್ಕಿಸುವುದಕ್ಕಾಗಿ iPhone ‌ನಲ್ಲಿ Wi-Fi ಮತ್ತು ಬ್ಲೂಟೂತ್ ಸಕ್ರಿಯಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿ.

  • ಬೆಂಬಲಿತ ಸಾಧನ ಪ್ರಕಾರಗಳು ಮತ್ತು ಮಾಡೆಲ್‌ಗಳಿಗಾಗಿ, Apple CarPlay ವೆಬ್‌ಸೈಟ್ ಅನ್ನು https://www.apple.com/ios/carplay ನಲ್ಲಿ ನೋಡಿ.
  • ಒಂದು ವೇಳೆ Apple CarPlay ಅಥವಾ Siri ಗಾಗಿ ನಿಮಗೆ ಆಯ್ಕೆಗಳು ಕಾಣಿಸದಿದ್ದರೆ, ಇತ್ತೀಚಿನ iOS ಆವೃತ್ತಿಗೆ ಅಪ್‌ಡೇಟ್ ಮಾಡಿ.
  • Apple Corporation ನೀತಿಗೆ ಅನುಸಾರವಾಗಿ Apple CarPlay ನಲ್ಲಿ ಲಭ್ಯವಿರುವ ಫೀಚರ್‌ಗಳು ಮತ್ತು ಐಕಾನ್‌ಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
  • ನೀವು ಆರು iPhone ಗಳ ತನಕ ನೋಂದಣಿ ಮಾಡಬಹುದು.
  1. ಹೋಮ್ ಸ್ಕ್ರೀನ್‌ನಲ್ಲಿ, ಸೆಟ್ಟಿಂಗ್‌ಗಳು ಫೋನ್ ಸಂಪರ್ಕಗಳು ಫೋನ್ ಸಂಪರ್ಕಗಳು ಹೊಸದು ಸೇರಿಸಿ ಒತ್ತಿ.
  2. ಸಂಪರ್ಕಿಸಲು iPhone ನಲ್ಲಿ Wi-Fi ಮತ್ತು ಬ್ಲೂಟೂತ್ ಆನ್ ಮಾಡಿ ಮತ್ತು ಹುಡುಕಿದ ಬ್ಲೂಟೂತ್ ಸಾಧನಗಳ ಪಟ್ಟಿಯಿಂದ ವಾಹನ ಸಿಸ್ಟಂ ಆಯ್ಕೆ ಮಾಡಿ.
    • ಸಿಸ್ಟಂನ ಬ್ಲೂಟೂ ಸಾಧನದ ಹೆಸರನ್ನು ಪಾಪ್ ಅಪ್ ಆಗುವ ಹೊಸ ಸಾಧನ ಸೇರಿಸಿ ವಿಂಡೋದಲ್ಲಿ ಕಾಣಬಹುದು.
  3. iPhone ಸ್ಕ್ರೀನ್‌ನಲ್ಲಿನ ಪರಿಶೀಲನೆ ಕೋಡ್ ಸಿಸ್ಟಂ ಸ್ಕ್ರೀನ್‌ನಲ್ಲಿರುವ ಕೋಡ್‌ಗೆ ಹೊಂದಿಕೆಯಾಗುತ್ತದೆಯೇ ಎಂದು ಖಚಿತಪಡಿಸಿ ಮತ್ತು iPhone ‌ನಿಂದ ಸಂಪರ್ಕವನ್ನು ಅನುಮೋದಿಸಿ.
  4. ನೀವು ಮೊದಲ ಬಾರಿಗೆ Apple CarPlay ಗೆ ಸಂಪರ್ಕಗೊಂಡಾಗ, ಸಿಸ್ಟಂ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾದ ಪಾಪ್-ಅಪ್ ವಿಂಡೋವನ್ನು ಪರಿಶೀಲಿಸಿ ಮತ್ತು ಹೌದು ಅನ್ನು ಒತ್ತಿ.
  5. iPhone ನಿಂದ Apple CarPlay ಸಕ್ರಿಯಗೊಳಿಸಲು ಒಪ್ಪಿ.
  6. ಹೋಮ್ ಸ್ಕ್ರೀನ್‌ನಿಂದ Apple CarPlay ಒತ್ತಿ ಮತ್ತು ನಿಮ್ಮ iPhone ‌ನಲ್ಲಿ ಲಭ್ಯವಿರುವ ವಿವಿಧ ಫೀಚರ್‌ಗಳನ್ನು ಬಳಸಿ.
    • •  ಫೋನ್, ಸಂಗೀತ, ನ್ಯಾವಿಗೇಶನ್ ಅಥವಾ ಇತರ ವೈಶಿಷ್ಟ್ಯಗಳನ್ನು ರನ್ ಮಾಡಲು, ಸಿಸ್ಟಂ ಸ್ಕ್ರೀನ್‌ನಲ್ಲಿ ಅನುಕ್ರಮ ಐಕಾನ್ ಅನ್ನು ಒತ್ತಿ.
    • •  Siri ವಾಯ್ಸ್ ರೆಕಗ್ನಿಶನ್ ಫೀಚರ್ ಅನ್ನು ರನ್ ಮಾಡಲು, ಸ್ಟೀರಿಂಗ್ ವೀಲ್‌ನಲ್ಲಿರುವ ವಾಯ್ಸ್ ರೆಕಗ್ನಿಶನ್ ಬಟನ್ ಅನ್ನು ಒತ್ತಿ.
    • ಯಶಸ್ವಿಯಾಗಿ iPhone ಸಂಪರ್ಕಗೊಂಡಿರುವಾಗ, ಹೋಮ್ ಸ್ಕ್ರೀನ್‌ನಲ್ಲಿ ಫೋನ್ ಪ್ರೊಜೆಕ್ಷನ್ ಎಂಬುದು Apple CarPlay ಗೆ ಬದಲಾಯಿಸುತ್ತದೆ. ಒಂದು ವೇಳೆ Apple CarPlay ಗೋಚರಿಸದೇ ಇದ್ದರೆ, ಮತ್ತೊಮ್ಮೆ ಸಂಪರ್ಕವನ್ನು ಪ್ರಯತ್ನಿಸಿ.
    • Apple CarPlay ಬಳಕೆಯಲ್ಲಿರುವಾಗ ನೀವು ಈ ಕೆಳಗಿನ ಕಾರ್ಯವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಿಲ್ಲ.
      • Android Auto
      • ಬ್ಲೂಟೂತ್ ಫೋನ್
      • ಕಂಟ್ರೋಲ್ ಪ್ಯಾನೆಲ್ ಅಥವಾ ಸ್ಟೀರಿಂಗ್ ವೀಲ್ ರಿಮೋಟ್‌ ಕಂಟ್ರೋಲ್ ಬಳಸಿ ಬ್ರೌಸ್ ಮಾಡುವುದು
    • ಫೋನ್ ಪ್ರೊಜೆಕ್ಷನ್ ಮೂಲಕ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ನ್ಯಾವಿಗೇಶನ್ ಅನ್ನು ಬಳಸುವಾಗ, ನಿಮ್ಮ ವಾಹನದ ಸ್ಪೀಕರ್‌ಗಳ ಮೂಲಕ ಸಿಸ್ಟಂನ ಮೀಡಿಯಾ ಕಾರ್ಯ ಮತ್ತು ನ್ಯಾವಿಗೇಶನ್‌ ಎರಡರಿಂದಲೂ ಧ್ವನಿಗಳನ್ನು ಪ್ಲೇ ಮಾಡಲಾಗುತ್ತದೆ. ಎರಡೂ ಧ್ವನಿಗಳು ಪ್ಲೇ ಆಗುತ್ತಿರುವಾಗ ವಾಲ್ಯೂಮ್ ಅನ್ನು ನೀವು ಸರಿಹೊಂದಿಸಿದರೆ, ಮೊದಲು ನ್ಯಾವಿಗೇಶನ್ ಆ್ಯಪ್ ವಾಲ್ಯೂಮ್ ಅನ್ನು ಸರಿಹೊಂದಿಸಲಾಗುತ್ತದೆ.
  7. Apple CarPlay ಮುಚ್ಚಲು, ಸಿಸ್ಟಂ ಸ್ಕ್ರೀನ್‌ನ ಸಾಧನ ಸಂಪರ್ಕ ಪುಟದಿಂದ ವೈರ್‌ಲೆಸ್ ಸಂಪರ್ಕವನ್ನು ಡಿಸ್‌ಕನೆಕ್ಟ್ ಮಾಡಿ.