ವೈರ್‌ಲೆಸ್ ಆಗಿ Android Auto ಬಳಸುವುದು
Android ಸ್ಮಾರ್ಟ್‌ಫೋನ್ ಅನ್ನು ವಾಹನಕ್ಕೆ Android Auto ಜೊತೆಗೆ ಸಂಪರ್ಕಿಸಿದಾಗ, ಆ್ಯಪ್‌ಗಳ ಬಳಕೆದಾರ-ಸ್ನೇಹಿ ಇಂಟರ್‌ಫೇಸ್ ಬಳಸಿಕೊಂಡು ವೈಡ್‌ಸ್ಕ್ರೀನ್‌ನಲ್ಲಿ ನೀವು ಆ್ಯಪ್‌ಗಳನ್ನು ರನ್ ಮಾಡಬಹುದು ಮತ್ತು ನಿಯಂತ್ರಿಸಬಹುದು. ಸಂಪರ್ಕಿಸುವುದಕ್ಕಾಗಿ ಸ್ಮಾರ್ಟ್‌ಪೋನ್‌ನಲ್ಲಿ Wi-Fi ಮತ್ತು ಬ್ಲೂಟೂತ್ ಸಕ್ರಿಯಗೊಂಡಿದೆ ಎಂಬುದನ್ನು ಖಚಿತಪಡಿಸಿ.
- ಬೆಂಬಲಿತ ದೇಶಗಳು, ಸಾಧನ ಪ್ರಕಾರಗಳು ಮತ್ತು ಮಾಡೆಲ್‌ಗಳಿಗಾಗಿ, Android Auto ವೆಬ್‌ಸೈಟ್ ಅನ್ನು https://www.android.com/auto ನಲ್ಲಿ ನೋಡಿ.
- ಒಂದು ವೇಳೆ Android Auto ಅನ್ನು ಇನ್‌ಸ್ಟಾಲ್ ಮಾಡದೇ ಇದ್ದರೆ, Google Play Store ನಿಂದ Android Auto ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ.
- Google Corporation ನೀತಿಗೆ ಅನುಸಾರವಾಗಿ Android Auto ನಲ್ಲಿ ಲಭ್ಯವಿರುವ ಫೀಚರ್‌ಗಳು ಮತ್ತು ಐಕಾನ್‌ಗಳು ಬದಲಾವಣೆಗೆ ಒಳಪಟ್ಟಿರುತ್ತವೆ.
- ನೀವು ಆರು Android ಸ್ಮಾರ್ಟ್‌ಫೋನ್‌ಗಳ ತನಕ ಸೇರಿಸಬಹುದು.
- ಹೋಮ್ ಸ್ಕ್ರೀನ್‌ನಲ್ಲಿ, ಸೆಟ್ಟಿಂಗ್‌ಗಳು ▶ ಫೋನ್ ಸಂಪರ್ಕಗಳು ▶ ಫೋನ್ ಪ್ರೊಜೆಕ್ಷನ್ ▶ Android Auto ಸೆಟ್ಟಿಂಗ್‌ಗಳು ಒತ್ತಿ ತದನಂತರ Android Auto ಸಕ್ರಿಯಗೊಳಿಸಿ ಸಕ್ರಿಯಗೊಳಿಸಿ.
- ಹೋಮ್ ಸ್ಕ್ರೀನ್‌ನಲ್ಲಿ, ಸೆಟ್ಟಿಂಗ್‌ಗಳು ▶ ಫೋನ್ ಸಂಪರ್ಕಗಳು ▶ ಫೋನ್ ಸಂಪರ್ಕಗಳು ▶ ಹೊಸದು ಸೇರಿಸಿ ಒತ್ತಿ.
- ನಿಮ್ಮ Android ಸ್ಮಾರ್ಟ್ಫೋನ್ಗೆ ಸಂಪರ್ಕಗೊಳ್ಳಲು ಸಾಧ್ಯವಾಗದೇ ಇದ್ದರೆ, Android ಸ್ಮಾರ್ಟ್‌ಫೋನ್ ಮತ್ತು ವಾಹನ ಸಿಸ್ಟಂನಿಂದ ನೋಂದಾಯಿಸಿದ ಎಲ್ಲಾ ಸಾಧನಗಳನ್ನು ಅಳಿಸಿ, ತದನಂತರ ಸಾಧನಗಳನ್ನು ಮತ್ತೊಮ್ಮೆ ನೋಂದಾಯಿಸಿ. ▶ "ಫೋನ್ ಪ್ರೊಜೆಕ್ಷನ್ ಸಂಪರ್ಕ ದೋಷವನ್ನು ಪರಿಹರಿಸುವುದು" ನೋಡಿ.
- ಸಂಪರ್ಕಿಸಲು ಬ್ಲೂಟೂತ್ ಸಾಧನದಲ್ಲಿ Wi-Fi ಮತ್ತು ಬ್ಲೂಟೂತ್ ಆನ್ ಮಾಡಿ ಮತ್ತು ಹುಡುಕಿದ ಬ್ಲೂಟೂತ್ ಸಾಧನಗಳ ಪಟ್ಟಿಯಿಂದ ವಾಹನ ಸಿಸ್ಟಂ ಅನ್ನು ಆಯ್ಕೆ ಮಾಡಿ.
- ಸಿಸ್ಟಂನ ಬ್ಲೂಟೂ ಸಾಧನದ ಹೆಸರನ್ನು ಪಾಪ್ ಅಪ್ ಆಗುವ ಹೊಸ ಸಾಧನ ಸೇರಿಸಿ ವಿಂಡೋದಲ್ಲಿ ಕಾಣಬಹುದು.
- ಸ್ಮಾರ್ಟ್‌ಫೋನ್ ಸ್ಕ್ರೀನ್‌ನಲ್ಲಿನ ದೃಢೀಕರಣ ಕೋಡ್ ಸಿಸ್ಟಂ ಸ್ಕ್ರೀನ್‌ನಲ್ಲಿರುವ ಕೋಡ್‌ಗೆ ಹೊಂದಿಕೆಯಾಗುತ್ತದೆಯೇ ಎಂದು ಖಚಿತಪಡಿಸಿ ಮತ್ತು ಸ್ಮಾರ್ಟ್‌ಫೋನ್‌ನಿಂದ ಸಂಪರ್ಕವನ್ನು ಅನುಮೋದಿಸಿ.
- ನೀವು ಮೊದಲ ಬಾರಿಗೆ Android Auto ಅನ್ನು ಸಂಪರ್ಕಿಸಿದಾಗ, ಸಿಸ್ಟಂ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲಾದ ಪಾಪ್-ಅಪ್ ವಿಂಡೋವನ್ನು ಪರಿಶೀಲಿಸಿ ಮತ್ತು ಹೌದು ಅನ್ನು ಒತ್ತಿ.
- ಸ್ಮಾರ್ಟ್‌ಫೋನ್‌ನಿಂದ Android Auto ಸಕ್ರಿಯಗೊಳಿಸಲು ಒಪ್ಪಿ.
- ಹೋಮ್ ಸ್ಕ್ರೀನ್‌ನಿಂದ Android Auto ಒತ್ತಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ವಿವಿಧ ಫೀಚರ್‌ಗಳನ್ನು ಬಳಸಿ.
- • ಫೋನ್, ಸಂಗೀತ, ನ್ಯಾವಿಗೇಶನ್ ಅಥವಾ ಇತರ ವೈಶಿಷ್ಟ್ಯಗಳನ್ನು ರನ್ ಮಾಡಲು, ಸಿಸ್ಟಂ ಸ್ಕ್ರೀನ್‌ನಲ್ಲಿ ಅನುಕ್ರಮ ಐಕಾನ್ ಅನ್ನು ಒತ್ತಿ.
- • Google ವಾಯ್ಸ್ ರೆಕಗ್ನಿಶನ್ ಅನ್ನು ಅನ್ನು ಬಳಸಲು, ಸ್ಟೀರಿಂಗ್ ವೀಲ್‌ನಲ್ಲಿರುವ ವಾಯ್ಸ್ ರೆಕಗ್ನಿಶನ್ ಬಟನ್ ಅನ್ನು ಒತ್ತಿ.
- ಯಶಸ್ವಿಯಾಗಿ ಸ್ಮಾರ್ಟ್‌ಫೋನ್ ಸಂಪರ್ಕಗೊಂಡಿರುವಾಗ, ಹೋಮ್ ಸ್ಕ್ರೀನ್‌ನಲ್ಲಿ ಫೋನ್ ಪ್ರೊಜೆಕ್ಷನ್ ಎಂಬುದು Android Auto ಗೆ ಬದಲಾಯಿಸುತ್ತದೆ. ಒಂದು ವೇಳೆ Android Auto ಗೋಚರಿಸದೇ ಇದ್ದರೆ, ಮತ್ತೊಮ್ಮೆ ಸಂಪರ್ಕವನ್ನು ಪ್ರಯತ್ನಿಸಿ.
- ಸಂಪರ್ಕವು ಸ್ಥಿರವಾಗಿ ಇಲ್ಲದಿದ್ದರೆ, Android Auto ಸೆಟ್ಟಿಂಗ್‌ಗಳು ಸ್ಕ್ರೀನ್‌ನಿಂದ, ಮತ್ತೊಮ್ಮೆ Wi-Fi ಸ್ಕ್ರೀನ್ ಅನ್ನು ರಚಿಸಲು
▶ ಹೊಸ Wi-Fi ಪಾಸ್‌ಕೀ ಜನರೇಟ್ ಮಾಡಿ ಒತ್ತಿ ಹಾಗೂ ಮತ್ತೊಮ್ಮೆ ಸಂಪರ್ಕವನ್ನು ಪ್ರಯತ್ನಿಸಿ. - Android Auto ಬಳಕೆಯಲ್ಲಿರುವಾಗ ನೀವು ಈ ಕೆಳಗಿನ ಕಾರ್ಯವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಿಲ್ಲ.
- Apple CarPlay
- ಕಂಟ್ರೋಲ್ ಪ್ಯಾನೆಲ್ ಅಥವಾ ಸ್ಟೀರಿಂಗ್ ವೀಲ್ ರಿಮೋಟ್ ಕಂಟ್ರೋಲ್ ಬಳಸಿ ಬ್ರೌಸ್ ಮಾಡುವುದು
- ಫೋನ್ ಪ್ರೊಜೆಕ್ಷನ್ ಮೂಲಕ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ನ್ಯಾವಿಗೇಶನ್ ಅನ್ನು ಬಳಸುವಾಗ, ನಿಮ್ಮ ವಾಹನದ ಸ್ಪೀಕರ್‌ಗಳ ಮೂಲಕ ಸಿಸ್ಟಂನ ಮೀಡಿಯಾ ಕಾರ್ಯ ಮತ್ತು ನ್ಯಾವಿಗೇಶನ್ ಎರಡರಿಂದಲೂ ಧ್ವನಿಗಳನ್ನು ಪ್ಲೇ ಮಾಡಲಾಗುತ್ತದೆ. ಎರಡೂ ಧ್ವನಿಗಳು ಪ್ಲೇ ಆಗುತ್ತಿರುವಾಗ ವಾಲ್ಯೂಮ್ ಅನ್ನು ನೀವು ಸರಿಹೊಂದಿಸಿದರೆ, ಮೊದಲು ನ್ಯಾವಿಗೇಶನ್ ಆ್ಯಪ್ ವಾಲ್ಯೂಮ್ ಅನ್ನು ಸರಿಹೊಂದಿಸಲಾಗುತ್ತದೆ.
- Android Auto ಮುಚ್ಚಲು, ಸಿಸ್ಟಂ ಸ್ಕ್ರೀನ್‌ನ ಸಾಧನ ಸಂಪರ್ಕ ಪುಟದಿಂದ ವೈರ್‌ಲೆಸ್ ಸಂಪರ್ಕವನ್ನು ಡಿಸ್‌ಕನೆಕ್ಟ್ ಮಾಡಿ.